ಮುಸ್ಲಿಮರ ಬರ್ತ್‌ಡೇ ಕೇಕಿಗೆ ಶರಿಯತ್ ಕೊಕ್ಕೆ
ಮುಜಫರ್
ನಗರ, ನ. 7: ಇಸ್ಲಾಂ ಧರ್ಮದ ಪ್ರಕಾರ ಮುಸಲ್ಮಾನರು ಹುಟ್ಟುಹಬ್ಬ ಆಚರಿಸುವುದು ಸಮ್ಮತವಲ್ಲ ಮತ್ತು ಇದು ಇಸ್ಲಾಂ ಧರ್ಮದ ವಿರುದ್ದವಾಗಿದೆ ಎಂದು ಧಾರ್ಮಿಕ ಸಂಘಟನೆ ದಾರುಲ್ ಉಲೇಮಾ ಫತ್ವಾ ಹೊರಡಿಸಿದೆ. ಹುಟ್ಟುಹಬ್ಬ ಆಚರಿಸುವುದು ಪಾಶ್ಚಿಮಾತ್ಯರ ಸಂಪ್ರದಾಯವೇ ವಿನಾ ಅದು ನಮ್ಮ ಸಂಪ್ರದಾಯವಲ್ಲ ಎಂದು ಸ್ಪಷ್ಟಪಡಿಸಿದೆ. id="toptextpromo">ಅಲಿಘಡ
ಮುಸ್ಲಿಂ ವಿಶ್ವವಿದ್ಯಾಲಯದ ವಿಧ್ಯಾರ್ಥಿನಿಯೊಬ್ಬಳು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿದ್ದ ಸಂಘಟನೆಯ ಹಿರಿಯ ಸದಸ್ಯ ಮೌಲಾನ ಅಬ್ದುಲ್ ಕಾಸಿಂ, ಮುಸ್ಲಿಮರು ಹುಟ್ಟುಹಬ್ಬ ಆಚರಿಸುವುದು ಶರಿಯತ್ ಕಾನೂನಿಗೆ ವಿರುದ್ದ ಮತ್ತು ಪ್ರವಾದಿ ಮಹಮ್ಮದ ಜನ್ಮದಿನವನ್ನು ಆಚರಿಸುವುದೂ ಇಸ್ಲಾಂ ಸಂಪ್ರದಾಯವಲ್ಲ ಎಂದು ಹೇಳಿಕೆ ನೀಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಅಲಿಘಡ
ವಿಶ್ವವಿದ್ಯಾಲಯದ ಸಂಸ್ಥಾಪಕ ಸರ್ ಸಯ್ಯದ್ ಅಹಮದ್ ಖಾನ್ ಅವರ ಹುಟ್ಟುಹಬ್ಬ ಜನ್ಮದಿನಾಚರಣೆಯ ಸಂದರ್ಭದಲ್ಲೇ ಈ ವಿಷಯ ಪ್ರಸ್ತಾಪಿಸಿದ ಕಾಸಿಂ, ನಮ್ಮ ಧರ್ಮದ ವಿರುದ್ದವಾಗಿ ನಡೆದುಕೊಳ್ಳಬಾರದೆಂದು ಫರ್ಮಾನು ಹೊರಡಿಸಿದ್ದಾರೆ.











Click it and Unblock the Notifications