ನಿರಾಣಿ, ಬಿಎಸ್ ವೈಗೆ ಉರುಳಾದ 'ಜಿಮ್' ಭೂ ಹಂಚಿಕೆ

ಸಚಿವ ನಿರಾಣಿ ಮೇಲೆ ಆರೋಪ ಹೊರೆಸಿರುವ ಬೆಂಗಳೂರಿನ ಉದ್ಯಮಿ ಅಲಂ ಪಾಷಾ ಅವರಿಗೆ ಸಂಪೂರ್ಣವಾಗಿ ನಿರಾಣಿ ಅವರ ಅವ್ಯವಹಾರಗಳ ದಾಖಲೆಗಳನ್ನು ಒದಗಿಸುವಂತೆ ಲೋಕಾಯುಕ್ತ ವಿಶೇಷ ನ್ಯಾಯಮೂರ್ತಿ ಎನ್ ಕೆ ಸುಧೀಂದ್ರ ರಾವ್ ಅವರು ಸೂಚಿಸಿದ್ದಾರೆ.
ಅಲಂ ಪಾಷಾ ಅವರು ಹೊಂದಿರುವ ದಾಖಲೆಯ ಸಂಕ್ಷಿಪ್ತ ಮಾಹಿತಿ ವಿವರ ಇಲ್ಲಿದೆ: ಸಚಿವ ಮುರುಗೇಶ್ ನಿರಾಣಿ ಹಾಗೂ ಸಹ ಆರೋಪಿ ಅಂದಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಆದ ಒಪ್ಪಂದದ ಪ್ರಕಾರ ಕಂಪನಿಗಳಿಗೆ ಜಮೀನು ಒದಗಿಸಲು ಡಿನೋಟಿಫೈ ಅಸ್ತ್ರವನ್ನು ಬಳಸಿದ್ದಾರೆ.
ಜಿಎಂ 2010 ಎಫೆಕ್ಟ್: 2010ರ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದ ಫಲವಾಗಿ 389 ಕಂಪೆನಿಗಳ ಜೊತೆ ಸುಮಾರು 87.5 ಬಿಲಿಯನ್ ಯುಎಸ್ ಡಾಲರ್ ಮೊತ್ತದ ಬಂಡವಾಳ ಹರಿದು ಬಂದಿದೆ.
19 ಯೋಜನೆಗಳು ಈಗಾಗಲೇ ಕಾರ್ಯಗತವಾಗಿದ್ದು, 222 ಯೋಜನೆಗಳ ಅನುಷ್ಠಾನ ಪ್ರಗತಿಯಲ್ಲಿದೆ. 52 ವಿಶೇಷ ಆರ್ಥಿಕ ವಲಯಗಳಿಗೆ ಅನುಮೋದನೆ ನೀಡಲಾಗಿದೆ. ಅದರೆ, ಸೂಚಿತ ಕೈಗಾರಿಕೆಗಳು, ನೇಮಕಾತಿಗಳು ಇನ್ನೂ ನಡೆದಿಲ್ಲ. ಕಾಮಗಾರಿ ಪ್ರಗತಿಯಲ್ಲಿದೆ ಎಂದು ಮಾತರ್ ತೋರಿಸಲಾಗಿದೆ.
ಅಕ್ರಮ ಮಂಜೂರಾತಿ, ಡಿನೋಟೀಫೈ ವಿವರ ಮುಂದೆ ನೋಡಿ...












Click it and Unblock the Notifications