ಜಿಮ್ ಬಾಡಿ ನಿರಾಣಿ ಅಕ್ರಮ ಕಂಡು ಭೂ ಬಾಯ್ಬಿಡುತ್ತದೆ!

Minister Murugesh Nirani
ಬೆಂಗಳೂರು, ಅ.21: 2010ರ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದ ಹೆಸರಿನಲ್ಲಿ ಕೈಗಾರಿಕ ಸಚಿವ ಮುರುಗೇಶ್ ನಿರಾಣಿ ಹಾಗೂ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಾಡಿರುವ ಅಕ್ರಮಗಳ ಕಥೆ ಮುಂದುವರೆಸುತ್ತಾ ಜಮೀನು ಮಂಜೂರಾತಿ ವಿಷಯಕ್ಕೆ ಬರೋಣ...

ಬೇನಾಮಿ ಕಂಪನಿಗಳ ಹೆಸರಿನಲ್ಲಿ ಸುಮಾರು 1100 ಎಕರೆ ಭೂಮಿಯನ್ನು ಸ್ವಾಹ ಮಾಡಲಾಗಿದೆ. ಹಾಗೂ ಈ ಜಮೀನಿನ ಮೇಲೆ ಕೈಗಾರಿಕೆ ಸ್ಥಾಪನೆ, ನೇಮಕಾತಿ ಎಲ್ಲವೂ ನಡೆಯುವ ಭರವಸೆ ನೀಡಲಾಗಿದೆ.

ಸಾಯುಪ್ರಿಯ ಕಂಪನಿಗೆ 300 ಎಕರೆ, ಎಂಆರ್ ಎನ್ ಶುಗರ್ಸ್ ಕಂಪನಿಗೆ 300 ಎಕರೆ ಹಾಗೂ ಶಕ್ತಿ ಮಿನರಲ್ಸ್ ಗೆ 500 ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿತ್ತು.

ಅಕ್ರಮ ಡಿನೋಟೀಫೈ: KIADB ಸ್ವಾದೀನದಲ್ಲಿರುವ ದೇವನಹಳ್ಳಿ ತಾಲೂಕು ಹೂವಿನಾಯಕನ ಹಳ್ಳಿಯ ಸರ್ವೆ ನಂ. 124, 125, 126 ರಲ್ಲಿರುವ 20 ಎಕರೆ ಹಾಗೂ ನೆಲಮಂಗಲ ತಾಲೂಕಿನ ಡಾಬಸ್ ಪೇಟೆಯಲ್ಲಿನ 7 ಎಕರೆ ಭೂಮಿ ಅಕ್ರಮವಾಗಿ ಡಿನೋಟಿಫೈ ಮಾಡಿ ನಿರಾಣಿ ಅವರ ತಮ್ಮ ಸೇರಿದಂತೆ ಎಂಟು ಮಂದಿ ಆರೋಪಿಗಳಿಗೆ ಹಂಚಲಾಗಿದೆ.

ಕೈಗಾರಿಕಾ ಉದ್ದೇಶಕ್ಕೆ ಮೀಸಲಾಗಿರುವ ಭೂಮಿಯನ್ನು ಸ್ವಂತಕ್ಕೆ ಬಳಸಿರುವುದು, ಅಕ್ರಮ ಡಿನೋಟಿಫೈ ಮಾಡಿರುವುದರಲ್ಲಿ ಅಂದಿನ ಯಡಿಯೂರಪ್ಪ ಅವರನ್ನು ಸಹ ಆರೋಪಿಯನ್ನಾಗಿ ಮಾಡಿ ದೂರು ಸಲ್ಲಿಸಲಾಗಿದೆ. ಇನ್ನು ಜಿಮ್ 2010 ಅಕ್ರಮ ಒಪ್ಪಂದಗಳ ಪುರಾಣ ಮತ್ತೊಮ್ಮೆ ನೋಡೋಣ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+