ಪಾಷಾ ಇನ್ ಟ್ರಬಲ್, ಅ.24ರ ತನಕ ನಿರಾಣಿ ನಿರಾಳ

Minister Murugesh Nirani
ಬೆಂಗಳೂರು, ಅ.21: ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಸೇರಿದಂತೆ 9 ಜನರ ಮೇಲೆ ಉದ್ಯಮಿ ಅಲಂ ಪಾಷಾ ಸಲ್ಲಿಸಿರುವ ಖಾಸಗಿ ದೂರಿನ ವಿಚಾರಣೆ ನಡೆಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಅ.24ಕ್ಕೆ ಮುಂದೂಡಿದ್ದಾರೆ.

ಈ ಮಧ್ಯೆ ಸರಿಯಾಗಿ ದಾಖಲೆ ಒದಗಿಸದೆ ಬೇಕಾಬಿಟ್ಟಿ ಹೇಳಿಕೆ ನೀಡುತ್ತಿದ್ದ ಉದ್ಯಮಿ ಪಾಷಾ ಅವರನ್ನು ಎಚ್ಚರಿಸಿದ ನ್ಯಾಯಾಧೀಶ ಎನ್ ಕೆ ಸುಧೀಂದ್ರರಾವ್ ಅವರು ಪಾಷಾಗೆ ಬೆವರಿಳಿಸಿದರು.

ನ್ಯಾಯಾಧೀಶ: ನಿಮ್ಮ ದೂರಿನ ಉದ್ದೇಶವೇನು? ನಿಮ್ಮ ಪೂರ್ವ ಹಿನ್ನೆಲೆ ಏನು?
ಪಾಷಾ: ಸರ್ಕಾರಕ್ಕೆ ಕೋಟ್ಯಾಂತರ ರೂ ನಷ್ಟವಾಗಿದೆ. ತಪ್ಪಿಸ್ಥರಿಗೆ ಶಿಕ್ಷೆಯಾಗಬೇಕು
ನ್ಯಾ: ಎಲ್ಲೆಲ್ಲಿ ಅಕ್ರಮ ನಡೆದಿದೆ ಸರಿಯಾಗಿ ಹೇಳಿ?
ಪಾ: ಅಲ್ಲೇ ಲಾಸ್ಟ್ ಪೇಜ್ ನಲ್ಲಿದೆ ನೋಡಿ ಸಾರ್ ಎಂದು ಬಿಟ್ಟಿದ್ದಾರೆ.

ಈ ಸಂದರ್ಭದಲ್ಲಿ ಕೆಂಡಾಮಂಡಲವಾದ ನ್ಯಾ. ಸುಧೀಂದ್ರರಾವ್ ಅವರು 'ನೀವು ಎಲ್ಲಿದ್ದೀರಿ, ಏನು ಮಾತಾಡುತ್ತಿದ್ದೀರಿ ಎಂಬ ಪ್ರಜ್ಞೆ ಇರಲಿ. ದಾಖಲೆ, ವಿವರ ಗಳಿಲ್ಲದೆ ನ್ಯಾಯಾಲಯದ ಸಮಯ ವ್ಯರ್ಥ ಮಾಡಬೇಡಿ ಎಂದು ತರಾಟೆ ತೆಗೆದುಕೊಂಡಿದ್ದಾರೆ.

ಇದರಿಂದ ಬೆಚ್ಚುಬಿದ್ದ ಅಲಂಪಾಷಾ ಬೆವರೊರೆಸಿಕೊಂಡು ದಾಖಲೆಗಳನ್ನು ಮತ್ತೊಮ್ಮೆ ಪರಿಶೀಲಿಸತೊಡಗಿದ್ದಾರೆ. ಅದನ್ನು ಕಂಡ ನ್ಯಾಯಾಧೀಶ ಸುಧೀಂದ್ರ ರಾವ್ ಅವರು ವಿಚಾರಣೆಯನ್ನು ಅ.24ಕ್ಕೆ ಮುಂದೂಡಿದ್ದಾರೆ.

ಪ್ರಸ್ತುತ ಪ್ರಕರಣದಲ್ಲಿ ಮುರುಗೇಶ್ ನಿರಾಣಿ ಅಲ್ಲದೆ ಎಚ್ ಆರ್ ನಿರಾಣಿ, ಶರಣ ಬಸಯ್ಯ, ಕರಿಯಣ್ನನವರ್, ಬೇಗೂರು ರುದ್ರಮೂರ್ತಿ, ಪೂರ್ಣಚಂದ್ರ, ಆರ್ ವಿ ವಡ್ನಾಳ್, ಶಾಂತ ಸುಬೀರ ಬೇಲೂರು, ಮೋಹನ್ ಎಂ, ಹೀರೇಮಠ ಮತ್ತು ಎಂ ರೋಷಯ್ಯ ಎಂಬುವರ ಮೇಲೆ ಆರೋಪವನ್ನು ಹೊರೆಸಲಾಗಿದೆ.

ಬಾಳೆಕಾಯಿ ಮಂಡಿ ಕಳ್ಳ: ಬಾಳೆಕಾಯಿ ಮಂಡಿಗೆ ಸೇರಿದ ಜಾಗದಲ್ಲಿ ಫೈವ್ ಸ್ಟಾರ್ ಹೋಟೆಲ್ ನಿರ್ಮಿಸಿ, ಪವರ್ ಆಫ್ ಅಟಾರ್ನಿ ತಿದ್ದಿರುವ ಪಾಷಾ ಅಕ್ರಮಗಳನ್ನು ಬಯಲಿಗೆಳೆಯುತ್ತೇನೆ ಎಂದು ಸಚಿವ ನಿರಾಣಿ ಗುಡುಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+