ಪ್ರಥಮ ಪಯಣಕ್ಕೆ ಮುನ್ನ ಮುಗ್ಗರಿಸಿದ ಮುನಿಯಪ್ಪ

ಮೊದಲ ಪಯಣಕ್ಕೆ ಎಲ್ಲವೂ ಸಿದ್ಧತೆ ನಡೆದಿತ್ತು. ಎಂಜಿ ರಸ್ತೆಯಲ್ಲಿರುವ ಮೆಟ್ರೋ ಸ್ಟೇಷನ್ ನ ಎರಡನೇ ಮಹಡಿಯಲ್ಲಿ ಹಸಿರು ಬಟನ್ ಒತ್ತಿ ಚಾಲನೆ ನೀಡಿದ ಕೆಲ ಸೆಕೆಂಡುಗಳಲ್ಲಿ ಎಲ್ಲರೂ ಮೆಟ್ರೋ ಬೋಗಿಗಳಲ್ಲಿ ತುಂಬಿಕೊಂಡರು,
ಮುನಿಯಪ್ಪ ಅವರಿಗೆ ಯಾರೋ ತಮ್ಮನ್ನು ಕರೆದ್ದಂತೆ ಭಾಸವಾಗಿದೆ. ಹಿಂತಿರುಗಿ ನೋಡಿ ಯಾರೂ ಇಲ್ಲ ಎಂದು ಖಾತ್ರಿ ಪಡಿಸಿಕೊಂಡು ಮುಂದಿದ್ದ ಮೆಟ್ರೋ ಡೋರ್ ನತ್ತ ನಿಧಾನಗತಿಯಿಂದ ಹೋಗಿದ್ದಾರೆ.
ಆದರೆ, ಸೆನ್ಸಾರ್ ಆಧಾರಿತ ಸ್ವಯಂಚಾಲಿತ ಹೈಡ್ರಾಲಿಕ್ ಡೋರ್ ಗಳು ಮುಚ್ಚಿಕೊಂಡಿದೆ. ಸಚಿವರು, ಸಂಸದರು ಬರ್ತಾ ಇದ್ದಾರೆ ಎಂದರೆ ವಿಮಾನ ಬೇಕಾದರೂ ಕೆಲ ಕಾಲ ನಿಲ್ಲಿಸಬಹುದು. ಆದರೆ ಮೆಟ್ರೋ ಟ್ರೈನ್ ನಿಲ್ಲುವುದಿಲ್ಲ ಎಂಬ ಸಾಮಾನ್ಯ ಜ್ಞಾನ ನಮ್ಮ ಸಚಿವರಿಗಿರಲಿಲ್ಲ.
ಸೋ, ಮುನಿಯಪ್ಪ ಅವರು ಹೊರಗಡೆ ನಿಂತು ಮುಖ ಸಪ್ಪಗೆ ಮಾಡಿಕೊಂಡು ಟಾ..ಟಾ ಮಾಡುತ್ತಿದ್ದ ದೃಶ್ಯಕ್ಕೆ ಏನೆಂದು ಹೇಳುವುದೋ ಗೊತ್ತಿಲ್ಲ.,












Click it and Unblock the Notifications