ದಕ್ಷಿಣ ಭಾರತದ ಮೊದಲ ಮೆಟ್ರೋಗೆ ಚಾಲನೆ

ನಗರದ ಎಂ.ಜಿ ರಸ್ತೆಯಲ್ಲಿರುವ ನಮ್ಮ ಮೆಟ್ರೋ ಸ್ಟೇಷನ್ ನಲ್ಲಿ ಬೆಂಗಳೂರಿನ ಕನಸಿನ ಸಾರಿಗೆ ಚಾಲನೆ ದೊರೆತಿದೆ. ಮೆಟ್ರೋ ಸ್ಟೇಷನ್ ನ ಎರಡನೇ ಮಹಡಿಯಲ್ಲಿ ಹೂವುಗಳಿಂದ ಅಲಂಕೃತಗೊಂಡ 'ಹಸಿರು ಬಟನ್' ಒತ್ತುವ ಮೂಲಕ ಮೆಟ್ರೋ ಸಂಚಾರಕ್ಕೆ ಚಾಲನೆ ನೀಡಲಾಯಿತು.
ಇದಕ್ಕೂ ಮುನ್ನ ಹೊಸ ವಾಹನಕ್ಕೆ ಸಾಂಪ್ರದಾಯಿಕ ಶೈಲಿಯಲ್ಲಿ ವೇದಘೋಷಗಳ ನಡುವೆ ಪೂಜೆ ಸಲ್ಲಿಸಲಾಯಿತು.
ಗಣ್ಯರ ದಂಡು: ಕೇಂದ್ರದ ನಾಯಕರಾದ ರೈಲ್ವೇ ಸಚಿವ ದಿನೇಶ್ ತ್ರಿವೇದಿ,ವೀರಪ್ಪ ಮೊಯ್ಲಿ, ಕೆಎಚ್ ಮುನಿಯಪ್ಪ, ಬಿಜೆಪಿ ನಾಯಕ ಅನಂತಕುಮಾರ್, ಸಚಿವ ಆರ್ ಅಶೋಕ್, ಬಚ್ಚೇಗೌಡ, ಸುರೇಶ್ ಕುಮಾರ್, ಶೋಭಾ ಕರಂದ್ಲಾಜೆ, ನರೇಂದ್ರ ಬಾಬು, ಮೇಯರ್ ಶಾರದಮ್ಮ ಮುಂತಾದವರು ಈ ಐತಿಹಾಸಿಕ ಪಯಣದಲ್ಲಿ ಭಾಗವಹಿಸಿದ್ದಾರೆ.
ಸುಮಾರು 900 ಜನ ಮೊದಲ ಪಯಣದ ಸುಖ ಅನುಭವಿಸಲಿದ್ದಾರೆ.
ಮೊದಲ ಪಯಣವೇ ಸಚಿವ ಮುನಿಯಪ್ಪ ಮಿಸ್...?












Click it and Unblock the Notifications