ಬೆಂಗಳೂರಲ್ಲಿ ಬೈಕ್‌ ಸವಾರನನ್ನ ಅಟ್ಟಾಡಿಸಿ ಹೊಡೆದ ಬೆನ್ಜ್‌ ಕಾರು ಮಾಲೀಕ, ವಿಡಿಯೋ ವೈರಲ್‌

ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ಓಡಾಡುವಾಗ ಯಾರಿಗೆ ತಾನೇ ಅರ್ಜೆಂಟ್ ಇರಲ್ಲ ಹೇಳಿ? ಆದರೆ ಇಂದಿರಾನಗರದ ಸಿಗ್ನಲ್‌ನಲ್ಲಿ ಬೈಕ್ ಸವಾರನೊಬ್ಬ ಮಾಡಿದ ಆ ಒಂದು 'ಸಣ್ಣ ತಪ್ಪು', ಆತನ ಪ್ರಾಣಕ್ಕೇ ಕಂಟಕ ತರುವಂತೆ ಮಾಡಿತ್ತು. ಐಷಾರಾಮಿ ಬೆಂಜ್ ಕಾರಿನ ಪಕ್ಕದಲ್ಲಿದ್ದ ಒಂದು ಇಂಚು ಜಾಗದಲ್ಲಿ ಬೈಕ್ ನುಗ್ಗಿಸಲು ಹೋದದ್ದೇ ತಡ, ಇಡೀ ಇಂದಿರಾನಗರ ರಸ್ತೆಯೇ ರಣರಂಗವಾಗಿ ಮಾರ್ಪಟ್ಟಿತು. ಅಸಲಿಗೆ ಆ ಸಿಗ್ನಲ್‌ನಲ್ಲಿ ನಡೆದಿದ್ದೇನು ಗೊತ್ತಾ?

ಐಷಾರಾಮಿ ಬೆಂಜ್ ಕಾರಿನ ಪಕ್ಕದಲ್ಲಿ ಬೈಕ್ ನುಗ್ಗಿಸಲು ಹೋದ ಸವಾರನೊಬ್ಬನಿಗೆ ಕಾರಿನಲ್ಲಿದ್ದ ವ್ಯಕ್ತಿ ರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸರುವ ಘಟನೆ ನಡೆದಿದೆ. ಇಂದಿರಾನಗರದ 12ನೇ ಮುಖ್ಯ ರಸ್ತೆಯ (12th Main Road) ಟ್ರಾಫಿಕ್ ಸಿಗ್ನಲ್‌ನಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಈ ವೇಳೆ ಅಲ್ಲಿಗೆ ಬಂದ ಬೈಕ್ ಸವಾರ, ಹೇಗಾದರೂ ಮಾಡಿ ಮುಂದೆ ಹೋಗಬೇಕೆಂದು ಅಲ್ಲೇ ನಿಂತಿದ್ದ ಮಾರುತಿ ಡಿಸೈರ್ ಹಾಗೂ ದುಬಾರಿ ಮರ್ಸಿಡಿಸ್-ಬೆಂಜ್ ಕಾರಿನ ನಡುವೆ ಇದ್ದ ಸಣ್ಣ ಗ್ಯಾಪ್‌ನಲ್ಲೇ ಬೈಕ್ ನುಗ್ಗಿಸಲು ಯತ್ನಿಸಿದ್ದಾನೆ.

Bengaluru Road Rage

ಮಾತಿಗೆ ಮಾತು ಬೆಳೆದು ಕೈ-ಕೈ ಮಿಲಾಯಿಸಿದ್ರು

ಬೈಕ್ ಸವಾರ ಇಷ್ಟೊಂದು ಹತ್ತಿರವಾಗಿ ಗಾಡಿ ತಂದಿದ್ದನ್ನು ನೋಡಿ ಮರ್ಸಿಡಿಸ್-ಬೆಂಜ್ ಕಾರಿನಲ್ಲಿದ್ದ ವ್ಯಕ್ತಿಗೆ ಸಿಟ್ಟು ನೆತ್ತಿಗೇರಿದೆ. ತಕ್ಷಣ ಕಾರಿನಿಂದ ಇಳಿದ ಆತ ಬೈಕ್ ಸವಾರನ ಮೇಲೆ ಕಿರುಚಾಡಿದ್ದಾನೆ. ನೋಡನೋಡುತ್ತಿದ್ದಂತೆ ಇಬ್ಬರ ನಡುವಿನ ಜಗಳ ವಿಕೋಪಕ್ಕೆ ತಿರುಗಿದೆ. ಕಾರಿನಲ್ಲಿದ್ದವರು ಬೈಕ್ ಸವಾರನನ್ನು ಮನಬಂದಂತೆ ಬೈದು, ಪ್ರಾಣ ಬೆದರಿಕೆ ಹಾಕಿ, ಸಾರ್ವಜನಿಕರ ಎದುರೇ ಆತನ ಮೇಲೆ ಕೈ ಮಾಡಿದ್ದಾರೆ. ಈ ವಿಡಿಯೋ ವೈರಲ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ವಾಹನ ಸವಾರರೇ ಎಚ್ಚರ; ಮೈಲೇಜ್‌ ಡ್ರಾಪ್‌ ಮಾತ್ರವಲ್ಲ, ನಿಮ್ಮ ಬೈಕ್-ಕಾರನ್ನ ಸೈಲೆಂಟಾಗಿ ಕೊಲ್ಲುತ್ತಿದ್ಯಾ E20 ಪೆಟ್ರೋಲ್?
ವಾಹನ ಸವಾರರೇ ಎಚ್ಚರ; ಮೈಲೇಜ್‌ ಡ್ರಾಪ್‌ ಮಾತ್ರವಲ್ಲ, ನಿಮ್ಮ ಬೈಕ್-ಕಾರನ್ನ ಸೈಲೆಂಟಾಗಿ ಕೊಲ್ಲುತ್ತಿದ್ಯಾ E20 ಪೆಟ್ರೋಲ್?

ಮೊದಲಿಗೆ ರಸ್ತೆಯಲ್ಲೇ ಇಷ್ಟೊಂದು ದೊಡ್ಡ ಗಲಾಟೆ ನಡೆಯುತ್ತಿದ್ದನ್ನು ಕಂಡು ಸಾರ್ವಜನಿಕರು ಮೂಕಪ್ರೇಕ್ಷಕರಂತೆ ನಿಂತಿದ್ದಾರೆ. ಸಿಗ್ನಲ್‌ನಲ್ಲಿದ್ದ ಇತರ ವಾಹನ ಸವಾರರು ಹಾಗೂ ಹಾದಿಹೋಕರು ತಕ್ಷಣ ಬೈಕ್ ಸವಾರನ ರಕ್ಷಣೆಗೆ ಧಾವಿಸಿದ್ದಾರೆ. ಎಲ್ಲರೂ ಮಧ್ಯಪ್ರವೇಶಿಸಿ ಜಗಳ ಬಿಡಿಸಿದ್ದರಿಂದ, ಬೈಕ್ ಸವಾರ ದೊಡ್ಡ ಅನಾಹುತದಿಂದ ಪಾರಾಗಿದ್ದಾನೆ.

ದೊಡ್ಡ ಕಾರು ಇದ್ದರೆ ದರ್ಪ ತೋರಿಸಬೇಕಾ?

ಈ ಘಟನೆ ಬೆಂಗಳೂರಿಗರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. "ದೊಡ್ಡ ಕಾರುಗಳಲ್ಲಿದ್ದ ತಕ್ಷಣ ರಸ್ತೆಯಲ್ಲಿ ಸಾಮಾನ್ಯ ಜನರ ಮೇಲೆ ದರ್ಪ ತೋರಿಸುವುದು ಎಷ್ಟು ಸರಿ? ತಪ್ಪು ಯಾರದ್ದೇ ಇರಲಿ, ರಸ್ತೆಯಲ್ಲಿ ಕಾನೂನು ಕೈಗೆತ್ತಿಕೊಳ್ಳಲು ಇವರಿಗೆ ಯಾರು ಹಕ್ಕು ಕೊಟ್ಟಿದ್ದಾರೆ?" ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಆ ಸಿಗ್ನಲ್‌ನಲ್ಲಿರುವ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿ ಹಲ್ಲೆ ಮಾಡಿದವರನ್ನು ಪೊಲೀಸರು ತಕ್ಷಣ ಬಂಧಿಸಬೇಕು. ಶ್ರೀಮಂತರಾಗಲಿ, ಬಡವರಾಗಲಿ ರಸ್ತೆಯಲ್ಲಿ ಗೂಂಡಾಗಿರಿ ಮಾಡುವವರ ಲೈಸೆನ್ಸ್ ರದ್ದು ಮಾಡಬೇಕು. ರಸ್ತೆಯಲ್ಲಿ ಎಲ್ಲರೂ ತಾಳ್ಮೆಯಿಂದ ಇರಬೇಕು, ಸಣ್ಣಪುಟ್ಟ ವಿಷಯಕ್ಕೆ ಜಗಳ ಆಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಇಂತಹ ರೋಡ್ ರೇಜ್ ಪ್ರಕರಣಗಳು ಹೆಚ್ಚುತ್ತಿರುವುದು ನಾಗರಿಕರಲ್ಲಿ ಕಳವಳವನ್ನುಂಟು ಮಾಡಿದೆ. ಈ ಘಟನೆಯ ವಿಡಿಯೋ ಅಥವಾ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಸಿಲಿಕಾನ್ ಸಿಟಿಯ ರಸ್ತೆ ಸುರಕ್ಷತೆಯ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಣ್ಣಪುಟ್ಟ ವಿಷಯಗಳಿಗೂ ರಸ್ತೆಯಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳುವ ಇಂತಹ ಕಿಡಿಗೇಡಿಗಳ ವಿರುದ್ಧ ಪೊಲೀಸರು ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಕಾಮೆಂಟ್‌ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+