ಮುಖ್ಯಮಂತ್ರಿ ಸದಾನಂದ ಗೌಡರ ಬಳಿ ಎಷ್ಟು ಆಸ್ತಿ ಇದೆ ಗೊತ್ತಾ?

cm-sadanda-gowda-declares-assets-liabilities
ಬೆಂಗಳೂರು, ಅ.20: ಸಿಎಂ ಸದಾನಂದ ಗೌಡ ನಿಜಕ್ಕೂ 'ಭೂಪತಿ'ಯೇ ಅವರ ಬಳಿ ಇದೆ 5 ಮನೆ, 20 ಎಕರೆ ಜಮೀನು. ಹೌದು, ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು 2010-11ನೇ ಸಾಲಿಗೆ ಅನ್ವಯವಾಗುವಂತೆ ಸೆಪ್ಟೆಂಬರ್ 2ರಂದು ಸಲ್ಲಿಸಿರುವ ತಮ್ಮ ಇಡೀ ಕುಟುಂಬದ ಆಸ್ತಿ ವಿವರ ಹೀಗಿದೆ.

ಈ ಅಫಿಡವಿಟ್ ನಲ್ಲಿ ನಮ್ಮ ಸಿ ಎಂ ಸಾಹೇಬರು ಬೆಲೆಬಾಳುವ ಐದು ಮನೆಗಳು, 20 ಎಕರೆ ಕೃಷಿ ಜಮೀನನ್ನು ಹೊಂದಿರುವುದಾಗಿ ಘೋಷಿಸಿದ್ದಾರೆ. ಗೌಡರ ಬಳಿ 3.01 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದ್ದರೆ ಅವರ ಪತ್ನಿ ಡಾಟಿ ಅವರ ಬಳಿ ರೂ 1.50 ಕೋಟಿ ಮೌಲ್ಯದ ಆಸ್ತಿ ಇದೆ.

ಬೆಂಗಳೂರಿನ ಎಚ್ಎಸ್ಆರ್ ಲೇಔಟಿನಲ್ಲಿ ವಿವಾದಿತ 50x80 ನಿವೇಶನ ಸೇರಿದಂತೆ ಮಂಗಳೂರು, ಬೆಂಗಳೂರಿನಲ್ಲಿ 90.06 ಲಕ್ಷ ರೂ. ಮೌಲ್ಯದ ಜಮೀನು ಹಾಗೂ 2.33 ಕೋಟಿ ರೂ. ಮೌಲ್ಯದ ಮನೆಗಳನ್ನು ಸದಾನಂದ ಗೌಡರು ತಮ್ಮ ಹೆಸರಿನಲ್ಲಿ ಹೊಂದಿದ್ದಾರೆ.

ಅಕ್ರಮ ಸಕ್ರಮ ಬಳುವಳಿ:
ತವರೂರಾದ ಪುತ್ತೂರಿನಲ್ಲಿ 10 ಲಕ್ಷ ರೂ. ಮೌಲ್ಯದ ಮನೆ, ಮಂಗಳೂರು ಕದ್ರಿಯಲ್ಲಿ 40 ಲಕ್ಷ ರೂ. ಮೌಲ್ಯದ ಮನೆ, ಮರೋಳಿಯಲ್ಲಿ 8 ಲಕ್ಷ ರೂ. ಮೌಲ್ಯದ ಮನೆ, ಬಂಗ್ರಕೂಳೂರಿನಲ್ಲಿ 109.52 ಲಕ್ಷ ರೂ. ಆಸ್ತಿ, ಬೆಂಗಳೂರಿನ ಜಾಲ ಬಳಿ 66.10 ಲಕ್ಷ ರೂ. ಮೌಲ್ಯದ ಆಸ್ತಿ ಹೊಂದಿರುವ ಬಗ್ಗೆ ವಿವರ ನೀಡಿದ್ದಾರೆ.

ಅದೇ ರೀತಿ ಪುತ್ತೂರಿನಲ್ಲಿ 3.30 ಲಕ್ಷ ರೂ. ಮೌಲ್ಯದ 0.07 ಎಕರೆ, ಮಂಗಳೂರಿನ ಕದ್ರಿಯಲ್ಲಿ 6.27 ಲಕ್ಷ ರೂ. ಮೌಲ್ಯದ 0.06.3 ಎಕರೆ, ಮಂಡೆಕೋಲಿನಲ್ಲಿ 1.50 ಲಕ್ಷ ರೂ. ಮೌಲ್ಯದ 1.39 ಎಕರೆ, ಮಂಗಳೂರಿನ ಮರೋಳಿಯಲ್ಲಿ 3.08 ಲಕ್ಷ ರೂ. ಮೌಲ್ಯದ 0.07 ಎಕರೆ, ಮಂಗಳೂರಿನ ಕದ್ರಿಯಲ್ಲಿ 6.47 ಲಕ್ಷ ರೂ. ಮೌಲ್ಯದ 0.06 ಎಕರೆ, ಬಂಗ್ರ ಕೂಳೂರಿನಲ್ಲಿ 25.87 ಲಕ್ಷ ರೂ. ಮೌಲ್ಯದ 0.16 ಎಕರೆ, ಪುತ್ತೂರಿನಲ್ಲಿ 26.98 ಲಕ್ಷ ರೂ. ಮೌಲ್ಯದ 1 ಎಕರೆ ಭೂಮಿ ಹೊಂದಿರುವುದಾಗಿ ತಿಳಿಸಿದ್ದಾರೆ. ಮಂಡೆಕೋಲಿನಲ್ಲಿರುವ ಜಮೀನು ಹಾಗೂ ಪುತ್ತೂರಿನಲ್ಲಿರುವ ಜಮೀನು ಜಂಟಿ ಪಾಲುದಾರಿಕೆಯದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+