ಸ್ಥಿತಿವಂತ ಸದಾನಂದ ಗೌಡರ ತಲೆ ಮೇಲೆ 1.45 ಕೋಟಿ ಸಾಲ!

ಮಂಗಳೂರು ಕಾರ್ಪೊರೇಶನ್ ಬ್ಯಾಂಕ್‌ನಲ್ಲಿ ಪಡೆದಿರುವ ಕಾರು ಸಾಲ 5.27 ಲಕ್ಷ ರೂ., ಅದೇ ಬ್ಯಾಂಕ್‌ನಲ್ಲಿ ಗೃಹ ಸಾಲ 16.09 ಲಕ್ಷ ರೂ., ಮಂಗಳೂರು ಫೆಡರಲ್ ಬ್ಯಾಂಕ್‌ನಲ್ಲಿ 63.75 ಲಕ್ಷ ರೂ., ಬೆಂಗಳೂರು ಅಪೆಕ್ಸ್ ಬ್ಯಾಂಕಿನಲ್ಲಿ 60 ಲಕ್ಷ ರೂ. ಸಾಲ ಮಾಡಿದ್ದಾರೆ.
ಇನ್ನು, ಸದಾನಂದ ಗೌಡರ ಧರ್ಮಪತ್ನಿ ಡಾಟಿ ಅವರು ಮಂಡೆಕೋಲಿನಲ್ಲಿ 8 ಲಕ್ಷ ರೂ. ಮೌಲ್ಯದ 5.80 ಎಕರೆ ಭೂಮಿ, ಬೆಂಗಳೂರಿನ ಜಾಲ ಹೋಬಳಿಯಲ್ಲಿ 5 ಲಕ್ಷ ರೂ. ಮೌಲ್ಯದ 7.5 ಗುಂಟೆ, ಮಂಗಳೂರಿನ ಕೊಡಿಯಾಲಬೈಲ್‌ನಲ್ಲಿ 54.17 ಲಕ್ಷ ರೂ. ಮೌಲ್ಯದ 20 ಸೆಂಟ್ಸ್ ಭೂಮಿ, ಕೊಡಿಯಾಲ್‌ಬೈಲ್‌ನಲ್ಲಿ 43.19 ಲಕ್ಷ ರೂ. ಮೌಲ್ಯದ ಆಸ್ತಿ, ಸೋಮವಾರಪೇಟೆಯಲ್ಲಿ 7.05 ಲಕ್ಷ ರೂ. ಮೌಲ್ಯದ 8.90 ಎಕರೆ ಭೂಮಿ ಹೊಂದಿದ್ದಾರೆ.
ಡಾಟಿ ಅವರು 6.39 ಲಕ್ಷ ರೂ. ಮೌಲ್ಯದ 422 ಗ್ರಾಂ ಚಿನ್ನ, 25 ಸಾವಿರ ರೂ. ಮೌಲ್ಯದ 1.25 ಕೆಜಿ ಬೆಳ್ಳಿಯನ್ನೂ ಹೊಂದಿದ್ದಾರೆ. ಸದಾನಂದ ಗೌಡರ ಬ್ಯಾಂಕ್ ಠೇವಣಿ- 12.87 ಲಕ್ಷ ರೂ., ಸಾಲ 1.47 ಕೋಟಿ ರೂ. ಹಾಗೆಯೇ, ಡಾಟಿಯವರ ಬ್ಯಾಂಕ್ ಠೇವಣಿ- 4.42 ಲಕ್ಷ ರೂ. ಹೂಡಿಕೆ- 7.65 ಲಕ್ಷ ರೂ.












Click it and Unblock the Notifications