ನಮ್ಮ ಮೆಟ್ರೋ ದರ : ಎಂಜಿ ರಸ್ತೆ ಟು ಭೈಯಪ್ಪನಹಳ್ಳಿ

BMRCL Metro fare chart
ಬೆಂಗಳೂರು, ಅ.17: ನಮ್ಮ ಮೆಟ್ರೋ ಉದ್ಘಾಟನೆಗೆ ಸಕಲ ಸಿದ್ಧತೆ ನಡೆದಿರುವ ಬೆನ್ನಲ್ಲೇ, ಮೆಟ್ರೋ ಮೊದಲ ಪಯಣ ಸುಖ ಪಡೆಯಲು ಬೆಂಗಳೂರಿಗರು ಮುಗಿ ಬೀಳುತ್ತಿದ್ದಾರೆ.

ಸುಮಾರು 2 ಲಕ್ಷ ಸ್ಮಾರ್ಟ್ ಕಾರ್ಡ್ ಗಳನ್ನು ಮೆಟ್ರೋ ಸ್ಟೇಷನ್ ಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ ಈಗಾಗಲೇ 20,000 ಕಾರ್ಡ್ ಗಳು ಮಾರಾಟವಾಗಿದೆ. ಆನ್ ಲೈನ್ ಮೂಲಕವೇ 3,000 ಟಿಕೆಟ್ ಮಾರಾಟ ಮಾಡಲಾಗಿದೆ ಎಂದು ಬಿಎಂಆರ್ ಸಿಎಲ್ ಅಧಿಕಾರಿಗಳು ಹೇಳಿದ್ದಾರೆ.

ಈ ರೀತಿ ಪ್ರೀಪೇಯ್ಡ್ ಪಯಣ ವ್ಯವಸ್ಥೆ ವಿಶ್ವದಲ್ಲೇ ಪ್ರಥಮ ಎಂದು ಹೇಳಲಾಗುತ್ತಿದೆ. 11 ಅಂಕಿಗಳಿರುವ 100 ರೂ. ಮುಖಬೆಲೆಯ ವಾರ್ಷಿಕ ಕಾರ್ಡ್ ಪಡೆದು ನಂತರ 10 ರೂ.ನಿಂದ 1,500 ರೂ ತನಕ ರೀಚಾರ್ಚ್ ಮಾಡಿಸಿಕೊಳ್ಳಬಹುದು.

ಒಂದು ವರ್ಷ ವ್ಯಾಲಿಡಿಟಿ ಇರುವ ಈ ಕಾರ್ಡ್ ಕೊಂಡರೆ ಶೇ.15ರಷ್ಟು ದರದಲ್ಲಿ ರಿಯಾಯಿತಿ ಪಡೆಯಬಹುದು. ಎಂಜಿ ರಸ್ತೆಯಿಂದ ಭೈಯಪ್ಪನಹಳ್ಳಿ ತನಕ ವಿವಿಧ ಸ್ಟೇಜ್ ಗಳಲ್ಲಿ ದರಪಟ್ಟಿ ವಿವರ ಇಲ್ಲಿದೆ. ಆವರಣದಲ್ಲಿರುವ ಸಂಖ್ಯೆ ವಾರ್ಷಿಕ್ ಕಾರ್ಡ್ ರಿಯಾಯಿತಿ ದರವನ್ನು ಸೂಚಿಸುತ್ತದೆ. ಎಲ್ಲಾ ಸಂಖ್ಯೆಗಳು ರುಪಾಯಿಗಳೆಂದು ಓದಿಕೊಳ್ಳಿ.

ನಿಲ್ದಾಣದ ಹೆಸರು ಎಂಜಿ ರಸ್ತೆ ಟ್ರಿನಿಟಿ ಸರ್ಕಲ್ ಹಲಸೂರು ಇಂದಿರಾನಗರ ಎಸ್ ವಿ ರಸ್ತೆ ಭೈಯಪ್ಪನಹಳ್ಳಿ
ಎಂಜಿ ರಸ್ತೆ 0 10(8.75) 10(8.75) 12(10.20) 14(11.90)
15(12.75)
ಟ್ರಿನಿಟಿ ಸರ್ಕಲ್ 10(8.75) 0 10(8.75) 12(10.20) 12(10.20) 14(11.90)
ಹಲಸೂರು 12(10.20) 12(10.20) 0 10(8.75) 12(10.20) 12(10.20)
ಇಂದಿರಾನಗರ 12(10.20) 12(10.20) 10(8.75) 0 10(8.75) 12(10.20)
ಎಸ್ ವಿ ರಸ್ತೆ 14(11.90) 12(10.20) 12(10.20) 10(8.75) 0 10(8.75)
ಭೈಯಪ್ಪನಹಳ್ಳಿ 15(12.75) 14(11.90) 12(10.20) 12(10.20) 10(8.75) 0
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+