ಯಡಿಯೂರಪ್ಪ ಕೈದಿ ನಂ.10462, ಕೃಷ್ಣಯ್ಯಶೆಟ್ಟಿ ನಂಬರ್ 10461

yeddyurappa-in-jail-prisonor-no-10462
ಬೆಂಗಳೂರು, ಅ.16: ಭೂ ಹಗರಣ ಆರೋಪದಡಿ ಪರಪ್ಪನ ಅಗ್ರಹಾರ ಜೈಲು ಸೇರಿಕೊಂಡ ತಕ್ಷಣ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿಚಾರಣಾಧೀನ ಕೈದಿ ನಂ. 10462 ಮತ್ತು ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ವಿಚಾರಣಾಧೀನ ಕೈದಿ ನಂ. 10461 ಎನಿಸಿಕೊಂಡಿದ್ದಾರೆ.

ಕೃಷ್ಣಯ್ಯ ಶೆಟ್ಟಿ, ಯಡಿಯೂರಪ್ಪಗಿಂತ ತುಸು ಮುಂಚೆ ಜೈಲ ಪಾಲಾದ ಕಾರಣ ಅವರ ಸಂಖ್ಯೆ (ನಂ. 10461) ಯಡಿಯೂರಪ್ಪ ಸಂಖ್ಯೆಗಿಂತ (ನಂ. 10462) ಮುಂದಿದೆ!

ಯಡಿಯೂರಪ್ಪಗೆ ನೆಲ ಮಹಡಿಯ ಡಿ ಬ್ಲಾಕ್‌ನಲ್ಲಿ ಪ್ರತ್ಯೇಕ ವಿಐಪಿ ಸೆಲ್‌ ಒದಗಿಸಲಾಗಿತ್ತು. 20x14 ಅಡಿ ವಿಸ್ತೀರ್ಣದ ಈ ಕೊಠಡಿ ಸ್ನಾನದ ಗೃಹ, ಶೌಚಾಲಯ, ಹಾಸಿಗೆ ಒಳಗೊಂಡಿತ್ತು. ಜತೆಗೆ ಟಿವಿಯೂ ಇತ್ತು. ಆದರೂ ಈ ಐಷರಾಮಿ ಬೇಡವೆಂದ ಯಡಿಯೂರಪ್ಪ ಇದ್ದಕ್ಕಿಂದ್ದಂತೆ ಬಿಪಿ ಹೆಚ್ಚಿಸಿಕೊಂಡು ಜಯದೇವ ಆಸ್ಪತ್ರೆಯತ್ತ ಸಾಗಿದ್ದಾರೆ.

ಇನ್ನು, ಕೃಷ್ಣಯ್ಯ ಶೆಟ್ಟಿ ಅವರು ಅನಾರೋಗ್ಯಪೀಡಿತರಾದ ಕಾರಣ ನೇರವಾಗಿ ಕಾರಾಗೃಹದಲ್ಲಿರುವ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರಿಂದ ತಡರಾತ್ರಿವರೆಗೂ ಅಲ್ಲೇ ಇರಿಸಿಕೊಳ್ಳಲಾಗಿತ್ತು. ಅವರಿಗಾಗಿ ಸಾಮಾನ್ಯ ಸೆಲ್‌ ನಿಗದಿಪಡಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+