ಗಾಲಿ ರೆಡ್ಡಿ ಎಸ್ಕೇಪ್ ರೂಟ್ ಟು ಫ್ಲೋರಿಡಾ!

ಸಿಬಿಐನಿಂದ ಪಾರಾಗಿ ವಿದೇಶಕ್ಕೆ ಹಾರಲು ತಯಾರಾಗಿದ್ದ ರೆಡ್ಡಿ ಬಳಿ ಎರಡು ಪಾಸ್ ಪೋರ್ಟ್ ಗಳಿರುವುದು ಪತ್ತೆಯಾಗಿದೆ. ನಕಲಿ ಪಾಸ್ ಪೋರ್ಟ್ ಹೊಂದಿರುವ ಕಾರಣ ಮತ್ತೊಂದು ಪ್ರಕರಣಕ್ಕೆ ರೆಡ್ಡಿ ಬಲಿಯಾಗಲಿದ್ದಾರೆ.
ಸಿಂಗಪುರ, ಇಂಡೋನೇಷಿಯಾ ಕಡೆ ವ್ಯಾಪಾರದ ದೃಷ್ಟಿಯಿಂದ ಹೋಗಿ ಬರುತ್ತಿದ್ದ ಜನಾರ್ದನ ರೆಡ್ಡಿ ಎಸ್ಕೇಪ್ ರೂಟ್ ಸವಿವರ ಇಲ್ಲಿದೆ.
ದುಬೈಗೆ ಹಾರಿ ಮೆಗಾ ಶಾಪಿಂಗ್ ಮಾಲ್ ಖರೀದಿಸುವ ಮಾತುಕತೆ ನಡೆಸಲು ರೆಡ್ಡಿ ಬಯಸಿದ್ದರು. ಎಮಿರೇಟ್ಸ್ ನ ರಾಜಮನೆತನಕ್ಕೆ ಸೇರಿದ ಆಸ್ತಿಯ ಭಾಗವಾಗಿರುವ ಈ ಮಾಲ್ ಕೊಳ್ಳಲು ರೆಡ್ಡಿ ಉತ್ಸುಕರಾಗಿದ್ದರು ಎಂದು ಸಿಬಿಐ ಮೂಲಗಳು ತಿಳಿಸಿದೆ.
ದುಬೈ ನಂತರ ಅಮೆರಿಕದ ಫ್ಲೋರಿಡಾಕ್ಕೆ ತೆರಳಲು ರೆಡ್ಡಿ ಯೋಜಿಸಿದ್ದರು. ಜೊತೆಗೆ ನೆಲ್ಬರೊ, ಸುಮಾತ್ರ, ಇಂಡೋನೇಷಿಯಾಗೆ ತೆರಳುವ ಯೋಚನೆ ಇತ್ತು. ಅರ್ಥ್ ಸ್ಟೋನ್ ಹೋಲ್ಡಿಂಗ್ ಲಿ ಕಂಪನಿಗಳ ಜೊತೆ ಮೈನಿಂಗ್ ವ್ಯವಹಾರ ಕುದುರಿಸತೊಡಗಿದ್ದ ರೆಡ್ಡಿ, ವಿಶ್ವ ಭೂಪಟದಲ್ಲಿ ಬಳ್ಳಾರಿ ರೆಡ್ಡಿ ಸೋದರರ ಹೆಸರು ಕೆತ್ತಲು ಹವಣಿಸಿದ್ದರು.
ಕೊನೆಗೆ ದುಬೈ ಸುರಕ್ಷಿತ ತಾಣ ಎನಿಸಿ ಎರಡನೇ ಪಾಸ್ ಪೋರ್ಟ್ ಬಳಸಲು ನಿರ್ಧರಿಸಿದ್ದರು. ಕನಿಷ್ಠವೆಂದರೂ 5,000 ಕೋಟಿ ರು ಡೀಲ್ ಮಾಡಿಕೊಂಡಿದ್ದ ರೆಡ್ಡಿ, ಹವಾಲಾ ಹಣ ಬಳಸಿ ವ್ಯಾಪಾರ ಮಾಡುವುದರಲ್ಲಿ ಪರಿಣಿತನಾಗಿದ್ದ. ಆದರೆ, ಟೈಮ್ ಸರಿಯಿರಲಿಲ್ಲ. ಪ್ಲ್ಯಾನ್ ಹಾಕಿದ್ದ ಒಂದು ವಾರಕ್ಕೂ ಮುನ್ನವೇ ಸಿಬಿಐ ತಂಡಕ್ಕೆ ಸಿಕ್ಕು ಜೈಲು ಪಾಲಾದರು ಎಂದು ಸಿಬಿಐ ಕಚೇರಿ ಮೂಲಗಳು ಹೇಳುತ್ತಿದೆ.
ಎರಡನೇ ಪಾಸ್ ಪೋರ್ಟ್ ಕಥೆ ಮುಂದೆ ಓದಿ...












Click it and Unblock the Notifications