5 ಸಾವಿರ ಕೋಟಿ ಡೀಲ್ ಗೆ 2 ನೇ ಪಾಸ್ ಪೋರ್ಟ್

ಎರಡನೇ ಪಾಸ್ ಪೋರ್ಟ್ ಕೈಗೆ ಸಿಕ್ಕ ಕಥೆ ಇಲ್ಲಿದೆ. ಬಳ್ಳಾರಿಯಿಂದ ಬೆಂಗಳೂರು, ದುಬೈ, ಇಂಡೋನೇಷಿಯಾ ಕೊನೆಗೆ ಫ್ಲೋರಿಡಾ ತನಕ ಎಸ್ಕೇಪ್ ರೂಟ್ ಹಾಕಿಟ್ಟುಕೊಂಡಿದ್ದ ರೆಡ್ಡಿಗೆ ಮತ್ತೊಂದು ಪಾಸ್ ಪೋರ್ಟ್ ನ ಅವಶ್ಯಕತೆಯಿತ್ತು.
ತಮಿಳುನಾಡಿನ ತಿರುಚ್ಚಿ ಕಚೇರಿಯಲ್ಲಿ ಎರಡನೇ ಪಾಸ್ ಪೋರ್ಟ್ ಗೆ ಅರ್ಜಿ ಹಾಕಿದ್ದರು. ಬೆಂಗಳೂರಿನ ಪಾಸ್ ಪೋರ್ಟ್ ಕಚೇರಿಯಿಂದ 2003ರಲ್ಲಿ ಅಧಿಕೃತ ಪಾಸ್ ಪೋರ್ಟ್ ಸಿಕ್ಕಿತ್ತು.
ಹಾಗಾಗಿ ಎರಡನೇ ಪಾಸ್ ಪೋರ್ಟ್ ಗೆ ಬೇನಾಮಿ ಹೆಸರು ಬಳಸಿದ್ದರು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಹೆಸರು, ವಿಳಾಸ, ತಾಯಿ ಹೆಸರು, ಹುಟ್ಟಿದ ದಿನಾಂಕ ಎಲ್ಲವೂ ಬೇನಾಮಿ ಹೆಸರಿನಲ್ಲಿ ಅರ್ಜಿ ತುಂಬಿ ಏಜೆಂಟ್ ಮೂಲಕ ಕಳಿಸಲಾಗಿತ್ತು.
ಮೊದಲನೇ ಪಾಸ್ ಪೋರ್ಟ್ ಅನ್ನು ಸಿಬಿಐ ತಂಡ ಮುಟ್ಟುಗೋಲು ಹಾಕಿಕೊಂಡ ನಂತರ ಎರಡನೇ ಪಾಸ್ ಪೋರ್ಟ್ ಅರ್ಜಿ ತುಂಬಿದ್ದರು. ಎರಡನೇ ಪಾಸ್ ಪೋರ್ಟ್ ಮೂಲಕ ವಿದೇಶಕ್ಕೆ ಎಸ್ಕೇಪ್ ಹಾಕುವ ಪ್ಲ್ಯಾನ್ ರೆಡ್ಡಿ ತಲೆಯಲ್ಲಿ ಓಡುತ್ತಿತ್ತು ಎಂದು ಸಿಬಿಐ ತಂಡ ಹೇಳಿದೆ.












Click it and Unblock the Notifications