ಆಡ್ವಾಣಿ ಯಾತ್ರೆ ಮಾರ್ಗ, ಬಸ್ ಪುಣೆಯಲ್ಲಿ ತಯಾರಿ

LK Advani
ಪುಣೆ, ಅ.7: ಯಾರ ಬೆಂಬಲ ಸಿಗಲಿ, ಬಿಡಲಿ ಅಡ್ವಾಣಿ ತಮ್ಮ ಸಂಕಲ್ಪದಂತೆ ಯಾತ್ರೆಗೆ ಸಿದ್ದರಾಗುತ್ತಿದ್ದಾರೆ. ಭಾರತದ ತುಂಬಾ ರಥ ಸಂಚರಿಸುವುದರಿಂದ ಅಡ್ವಾಣಿಗಿಂತ ಬಿಜೆಪಿಗೆ ಹೆಚ್ಚಿನ ಲಾಭವಾಗುವುದರಲ್ಲಿ ಸಂಶಯವಿಲ್ಲ.

ಪುಣೆಯ ಚಿಂದ್‌ವಾಡದ ದಿಲೀಪ್‌ ಚಬ್ರಿಯ ಡಿಸೈನ್‌ ಪ್ರೈ.ಲಿ.ನ ಕಾರ್ಯಾಗಾರದಲ್ಲಿ ಅಡ್ವಾಣಿ ಅವರ ರಥ(ಬಸ್) ತಯಾರಿಸಲಾಗುತ್ತಿದೆ. ವೋಲ್ವೋ ಐಷಾರಾಮಿ ಬಸ್‌ ಅನ್ನು ರಥವಾಗಿ ಅಡ್ವಾಣಿ ಬಳಸುತ್ತಿದ್ದಾರೆ. ಉಳಿದಂತೆ ವಿಶೇಷ ವಿಮಾನಗಳಲ್ಲಿ ಅಡ್ವಾಣಿ ಸಂಚರಿಸಲಿದ್ದಾರೆ

ಲಿಫ್ಟ್, ಎಲ್ ಸಿಡಿ ಟಿವಿ, ಕಂಪ್ಯೂಟರ್‌, ಸಾರ್ವಜನಿಕ ಭಾಷಣ ಮಾಡುವುದೇ ಮೊದಲಾದ ಸಂಪರ್ಕ ಸಂವಹನವನ್ನು ಅಳವಡಿಸಲಾಗುತ್ತಿದೆ. ಕಾರಾವಾನ್ ಮಾದರಿಯಲ್ಲಿ ಬಸ್ ಸಕಲ ಸೌಲಭ್ಯಗಳನ್ನು ಹೊಂದಿರುತ್ತದೆ.

ಇಲ್ಲಿ ಮಲಗುವ ಕೋಣೆ, ಮಿನಿ ಕಾನ್ಫ್ ರೆನ್ಸ್‌ ಹಾಲ್‌ ಕೂಡ ಇರುತ್ತದೆ. ರಥದೊಂದಿಗೆ ಆ್ಯಂಬುಲೆನ್ಸ್‌, ಭದ್ರತಾ ವ್ಯವಸ್ಥೆ ಸೇರಿದಂತೆ 18 ವಾಹನಗಳು ಇರುತ್ತವೆ.

ದಿನಕ್ಕೆ ಆರು ಗಂಟೆ ಪಯಣ: 84ರ ಹರೆಯದ ಆಡ್ವಾಣಿ ದಿನಕ್ಕೆ ಆರು ಗಂಟೆ ಪ್ರಯಾಣ ನಡೆಸಲಿದ್ದಾರೆ. ರಥವು ದಿನಕ್ಕೆ ಸರಾಸರಿ 250-300 ಕಿ.ಮೀ. ಸಂಚರಿಸುವ ಗುರಿ ಇರಿಸಿಕೊಳ್ಳಲಾಗಿದೆ. ರಥದ ಕೆಲಸ ಪೂರ್ಣಗೊಳ್ಳುತ್ತಿದ್ದು ಅ.7ರಂದು ಹೊರಗಡೆ ಕಾಣಿಸಿಕೊಳ್ಳಲಿದೆ.

ಅ.11ರಂದು ಜಯಪ್ರಕಾಶ ನಾರಾಯಣ್‌ ಅವರ ಜನ್ಮಸ್ಥಳವಾದ ಬಿಹಾರದ ಸಿತಾಬ್‌ ಡಿಯರನಿಂದ ರಥಯಾತ್ರೆ ಹೊರಡಲಿದೆ.

ರಥಯಾತ್ರೆ ಕ್ರಮವಾಗಿ ಬಿಹಾರ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಅಸ್ಸಾಂ, ಪಶ್ಚಿಮ ಬಂಗಾಳ, ಜಾರ್ಖಂಡ್‌, ಅಂಡಮಾನ್‌ ನಿಕೋಬಾರ್‌, ಛತ್ತೀಸ್‌ಗಢ, ಒರಿಸ್ಸಾ, ತಮಿಳುನಾಡು, ಕೇರಳ, ಕರ್ನಾಟಕ, ಗೋವಾ, ದಿಯು ಡಮನ್‌, ಗುಜರಾತ್‌, ರಾಜಸ್ಥಾನ, ಹರ್ಯಾಣ, ಪಂಜಾಬ್‌, ಹಿಮಾಚಲಪ್ರದೇಶದಲ್ಲಿ ಸಂಚರಿಸಿ ಜಮ್ಮು ಮೂಲಕ ನ.20ರಂದು ದೆಹಲಿಯಲ್ಲಿ ಮುಕ್ತಾಯವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+