ಅಡ್ವಾಣಿ ರಥ ಬಳ್ಳಾರಿ ನೆಲ ಮುಟ್ಟುವುದಿಲ್ಲ!

LK Advani
ಬೆಂಗಳೂರು, ಅ.7: ಬಿಜೆಪಿ ರಾಷ್ಟ್ರೀಯ ನಾಯಕ ಲಾಲ್‌ಕೃಷ್ಣ ಆಡ್ವಾಣಿಯವರ ಜನ ಚೇತನ ರಥಯಾತ್ರೆ ಕರ್ನಾಟಕದಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಮಾತ್ರ ಸಂಚರಿಸಲಿದೆ. ಅಕ್ರಮ ಗಣಿಗಾರಿಕೆಯ ಆಗರವಾಗಿರುವ ಬಳ್ಳಾರಿಗೆ ಅಡ್ವಾಣಿ ಬಸ್ ಬರುತ್ತಿಲ್ಲ ಎಂಬ ವಿಷಯ ಹೊರಬಿದ್ದಿದೆ.

ಭ್ರಷ್ಟಾಚಾರ ವಿರುದ್ಧದ ಈ ರಥಯಾತ್ರೆಯನ್ನು ಬಳ್ಳಾರಿಯಿಂದಲೇ ಆರಂಭಿಸುವಂತೆ ಅಡ್ವಾಣಿ ಅವರಿಗೆ ಮನವಿ ಕೂಡಾ ಕಳಿಸಲಾಗಿತ್ತು. ಆದರೆ, ಈಗ ಅಡ್ವಾಣಿ ಬಸ್ ರೂಟ್ ನಲ್ಲಿ ಬಳ್ಳಾರಿ ಸೇರಿಲ್ಲ. ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಾತ್ರ ಅಡ್ವಾಣಿ ಬಸ್ ಸಂಚರಿಸಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿದೆ.

ಅ.30ರಂದು ಕೇರಳದ ತ್ರಿಶ್ಶೂರ್‌, ಕೊಚ್ಚಿಗೆ ರಥ ಬರಲಿದೆ. ಕೊಚ್ಚಿಯಿಂದ ಬೆಂಗಳೂರಿಗೆ ಅ.30ರ ಸಂಜೆ ಅಡ್ವಾಣಿಯವರು ಬೆಂಗಳೂರಿಗೆ ಬರಲಿದ್ದು, ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಆದರೆ, ರಥ ಮಾತ್ರ ಕೇರಳದಿಂದ ಮಂಗಳೂರಿಗೆ ಬರಲಿದೆ. ಅ.31ರ ಬೆಳಗ್ಗೆ ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಆಡ್ವಾಣಿಯವರು ಮಂಗಳೂರಿಗೆ ಬರಲಿದ್ದಾರೆ.

ಅಂದು ಮಧ್ಯಾಹ್ನ ಉಡುಪಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಅ.31ರ ರಾತ್ರಿ ಉಡುಪಿಯಿಂದ ಉತ್ತರ ಕನ್ನಡ ಜಿಲ್ಲೆಗೆ ಆಡ್ವಾಣಿ ತೆರಳುವರು. ಅ.31ರ ರಾತ್ರಿ ತಂಗುವ ಆಡ್ವಾಣಿಯವರು ನ.1ರ ಬೆಳಗ್ಗೆ ಉ.ಕ. ಜಿಲ್ಲೆಯಲ್ಲಿ ಒಂದೆರಡು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು.

ಉ.ಕ. ಜಿಲ್ಲೆಯಿಂದ ರಥ ಗೋವವನ್ನು ಪ್ರವೇಶಿಸಲಿದೆ. ರಾಜ್ಯದಲ್ಲಿ ರಥಯಾತ್ರೆ ಜೊತೆಗೆ ಆಡ್ವಾಣಿ ಅವರು ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಆದರೆ, ಬಳ್ಳಾರಿಗೆ ಕಾಲಿಡುತ್ತಿಲ್ಲ. ಅಡ್ವಾಣಿ ಯಾತ್ರೆಗೆ ಸುಷ್ಮಾ ಸ್ವರಾಜ್ ಬೆಂಬಲ ಸಿಗದಿರುವುದೂ ಇದಕ್ಕೆ ಕಾರಣ ಎನ್ನಲಾಗಿದೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+