ವಿಶ್ವ ಶ್ರೇಷ್ಠ ಸಿಇಒ ಅಮೆಜಾನ್ ನ ಜೆಫ್

ಡಾಟ್ ಕಾಮ್ ಪ್ರಪಂಚದ ಕೋಟ್ಯಾಧೀಶ ಉದ್ಯಮಿಯಾಗಿ ಜೆಫ್ ಇಂದು ಗುರುತಿಸಲ್ಪಟ್ಟಿದ್ದಾರೆ.
ಅಮೆಜಾನ್ ಮೂಲಕ ಒಂದು ಮಾದರಿ ಉದ್ಯಮ ವಿನ್ಯಾಸ ರೂಪಿಸಿದ ಜೆಫ್, ಪುಸ್ತಕ ಪ್ರಕಾಶನ, ಖರೀದಿ, ಮಾರಾಟ ವ್ಯವಸ್ಥೆಗೆ ಹೊಸ ಭಾಷ್ಯ ಬರೆದವರು. ಪುಸ್ತಕಗಳ ಜೊತೆಗೆ ಸಿಡಿ, ಡಿವಿಡಿ, ಸಾಫ್ಟ್ ವೇರ್ ಹಾಗೂ ಕಂಪ್ಯೂಟರ್ ಗೇಮ್ಸ್ ಗಳನ್ನು ಕೊಳ್ಳಲು ಅಮೆಜಾನ್ ಸೂಕ್ತ ತಾಣವಾಗಿ ರೂಪುಗೊಂಡಿದೆ.
ಆನ್ ಲೈನ್ ನ ಅತಿದೊಡ್ಡ ಮಳಿಗೆಯಾಗಿರುವ ಅಮೆಜಾನ್ ಸುಮಾರು 96 ಬಿಲಿಯನ್ ಡಾಲರ್ ಮೌಲ್ಯ ಹೊಂದಿದೆ. Zappos, IMDb, Alexa Internet ಹಾಗೂ Audible.com. ಮುಂತಾದ ಪ್ರಮುಖ ಸಂಸ್ಥೆಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿರುವ ಅಮೆಜಾನ್ ಈಗ ಹೊಸ ಸಾಹಸಕ್ಕೂ ಕೈ ಹಾಕಿದೆ.
Kindle Fire tablet ಅನ್ನು $199 ಗೆ ಪರಿಚಯಿಸುವ ಮೂಲಕ ಓದಿನ ಗೀಳು ಹತ್ತಿಸಿಕೊಂಡವರನ್ನು ಸೆಳೆಯುವಲ್ಲಿ ಜೆಫ್ ಯಶಸ್ವಿಯಾಗಿದ್ದಾರೆ.












Click it and Unblock the Notifications