ವಿಶ್ವ ಶ್ರೇಷ್ಠ ಸಿಇಒ ಅಪ್ಪಟ ವ್ಯವಹಾರಸ್ಥ ಬಿಲ್

ಪೌಲ್ ಅಲೆನ್ ಜೊತೆಗೂಡಿ ಮೈಕ್ರೋಸಾಫ್ಟ್ ಎಂಬ ಸಾಫ್ಟವೇರ್ ಜಗತ್ತಿನ ದಿಗ್ಗಜನನ್ನು ಸೃಷ್ಟಿಸಿದ ಕೀರ್ತಿ ಬಿಲ್ ಗೇಟ್ಸ್ ಗೆ ಸಲ್ಲುತ್ತದೆ. ಈಗ ಬಿಲ್ ಮನಸ್ಸು ದಾನದತ್ತಿಯತ್ತ ಹೊರಳಿದ್ದು, ಪತ್ನಿ ಮಿಲಿಂಡಾ ಗೇಟ್ಸ್ ಜೊತೆ ಸೇರಿ ವಿಶ್ವದೆಲ್ಲೆಡೆ ದಾನ ಧರ್ಮ ಮಾಡುವ ಮೂಲಕ ಹೆಸರುವಾಗಿಯಾಗಿದ್ದಾರೆ.
ಮೈಕ್ರೋಸಫ್ಟ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಲ್ಲದೆ, ಮುಖ್ಯ ವಿನ್ಯಾಸಗಾರನಾಗಿ ಸಂಸ್ಥೆಯನ್ನು ಬೆಳೆಸಿದರು. ಪರ್ಸನಲ್ ಕಂಪ್ಯೂಟರ್, ಆಪರೇಟಿಂಗ್ ಸಿಸ್ಟಮ್, ಶೈಕ್ಷಣಿಕ ಯೋಜನೆ ರೂಪಿಸಿ ಬೆಳೆಸಿದ ಶ್ರೇಷ್ಠ ಸಿಇಒ ಎಂದು ಇಂದಿಗೂ ಗುರುತಿಸಲಾಗುತ್ತದೆ.
ಬಿಲ್ ಹೂಡುತ್ತಿದ್ದ ತಂತ್ರಗಳು ಹಲವು ಬಾರಿ ಕಂಪನಿ ಸ್ಪರ್ಧೆಯಿಂದ ಹಿಂದೆ ಸರಿದಂತೆ ಭಾಸವಾಗುತ್ತಿತ್ತು ಆದರೆ, ಅಂತಿಮವಾಗಿ ಮೈಕ್ರೋಸಾಫ್ಟ್ ಮಾರುಕಟ್ಟೆಯಲ್ಲಿ ಏಕಸ್ವಾಮ್ಯತೆ ಕಾಪಾಡುಕೊಳ್ಳುತ್ತಿತ್ತು. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಇಂದಿಗೂ ಅತ್ಯಂತ ಯಶಸ್ವಿ ಹಾಗೂ ಜನಪ್ರಿಯ ಉದ್ಯಮಿಯಾಗಿ ಬಿಲ್ ಗೇಟ್ಸ್ ರನ್ನು ಕಾಣಲಾಗುತ್ತದೆ.












Click it and Unblock the Notifications