ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುವ ಪೀಳಿಗೆ ಮಿಡಿತ ಅರಿತ ಸಿಇಒ ಮಾರ್ಕ್

By Mahesh
|
Google Oneindia Kannada News

Mark Zuckerberg
ಬೆಂಗಳೂರು, ಅ.5: ಐಟಿ ತಂತ್ರಜ್ಞಾನ ಬಳಸಿಕೊಂಡು,ಅಪಾರ ಜಾಣ ಪದವೀಧರರನ್ನು ಹುರಿದುಂಬಿಸಿ ಬಹುರಾಷ್ಟ್ರೀಯ ಕಂಪನಿಯನ್ನು ಮುನ್ನೆಡಿಸಿ ಕಂಪನಿಯನ್ನು ವಿಶ್ವದರ್ಜೆಗೇರಿಸಿ, ಹೊಸ ಪೀಳಿಗೆಗೆ ಮಾದರಿಯಾಗಿರುವ ಶ್ರೇಷ್ಠ ಟೆಕ್ ಸಿಇಒ ಗಳ ಪಟ್ಟಿ ಇಲ್ಲಿದೆ.

2. ಮಾರ್ಕ್ ಝುಕರ್ ಬರ್ಗ್: ಸಾಮಾಜಿಕ ಜಾಲ ತಾಣ ಫೇಸ್‌ಬುಕ್ ನ ಸ್ಥಾಪಕ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಾರ್ಕ್ ಝುಕರ್‌ಬರ್ಗ್ ಯುವ ಪೀಳಿಗೆಯ ನಾಡಿಮಿಡಿತ ಅರಿತವರು.

ಸಾಮಾಜಿಕ ಜಾಲ ತಾಣದ ನಿಜ ಅನುಭವವನ್ನು ಫೇಸ್ ಬುಕ್ ಮೂಲಕ ಯುವ ಜನಾಂಗಕ್ಕೆ ಮುಟ್ಟಿಸಿದ ಕೀರ್ತಿ ಮಾರ್ಕ್ ಗೆ ಸಲ್ಲುತ್ತದೆ. ಹಾರ್ವಡ್ ನ ಕೋಣೆಯೊಂದರಲ್ಲಿ 2004ರಲ್ಲಿ ಆರಂಭವಾದ ಈ ಜಾಲ ಇಂದು ಜಗವ್ಯಾಪಿಯಾಗಿ ಹರಡಿದೆ.

ವಿಶ್ವದ ಅತಿ ಕಡಿಮೆ ವಯಸ್ಸಿನ ಕೋಟ್ಯಾಧೀಶ ಎಂದು ಮಾರ್ಕ್ ರನ್ನು ಗುರುತಿಸಲಾಗಿದೆ. ಟೈಮ್ ನಿಯತಕಾಲಿಕೆಯ "2010ರ ವರ್ಷದ ವ್ಯಕ್ತಿ"ಯಾಗಿ ಕೂಡಾ ಮಾರ್ಕ್ ಆಯ್ಕೆಯಾಗಿದ್ದಾರೆ.

ಜುಲೈ 2011ರ ಗಣತಿಯಂತೆ ವಿಶ್ವದಾದ್ಯಂತ ಸುಮಾರು 800 ಮಿಲಿಯನ್ ಬಳಕೆದಾರರನ್ನು ಫೇಸ್ ಬುಕ್ ಹೊಂದಿದೆ. ಸುಮಾರು 41ಬಿಲಿಯನ್ ಡಾಲರ್ ತೂಗುವ ಕಂಪನಿ ಈಗ ಗೂಗಲ್ ಹಾಗೂ ಅಮೆಜಾನ್ ನಂತರದ ಸ್ಥಾನದಲ್ಲಿದೆ.
I

English summary
List and brief note on world's best tech ceos in the past two decade. Top leaders include Steve Jobs of Apple, Mark Zuckerberg of Facebook, Bill Gates of Microsoft, Jeff Bezos of Amazon, John Chambers of Cisco and Larry Ellison of Oracle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X