Get Updates
Get notified of breaking news, exclusive insights, and must-see stories!

ವಿಶ್ವ ಶ್ರೇಷ್ಠ ಟಾಪ್ 6 ಟೆಕ್ ಸಿಇಒಗಳು-1

CEO Steve Jobs
ಬೆಂಗಳೂರು, ಅ.5: ಐಟಿ ತಂತ್ರಜ್ಞಾನ ಬಳಸಿಕೊಂಡು,ಅಪಾರ ಜಾಣ ಪದವೀಧರರನ್ನು ಹುರಿದುಂಬಿಸಿ ಬಹುರಾಷ್ಟ್ರೀಯ ಕಂಪನಿಯನ್ನು ಮುನ್ನೆಡಿಸಿ ಕಂಪನಿಯನ್ನು ವಿಶ್ವದರ್ಜೆಗೇರಿಸಿ, ಹೊಸ ಪೀಳಿಗೆಗೆ ಮಾದರಿಯಾಗಿರುವ ಶ್ರೇಷ್ಠ ಟೆಕ್ ಸಿಇಒ ಗಳ ಪಟ್ಟಿ ಇಲ್ಲಿದೆ.

ಶ್ರೇಷ್ಠ ಸಿಇಒ ಉತ್ತಮ ಸಂವಹನ ಕಲೆ, ನಿರ್ಧಾರ ತೆಗೆದುಕೊಳ್ಳುವ ಜಾಣ್ಮೆ, ಯೋಜನೆ, ನಿರ್ವಹಣೆಯಲ್ಲಿ ಸಮರ್ಥನಾಗಿರಬೇಕಾಗುತ್ತದೆ. ಕಳೆದ ಎರಡು ದಶಕದಲ್ಲಿ ವಿಶ್ವದ ಗಮನ ಸೆಳೆದ ಸಿಇಒಗಳ ಸಂಕ್ಷಿಪ್ತ ವಿವರ ಓದಿ.

1. ಸ್ಟೀವ್ ಜಾಬ್ಸ್ : 1976ರಲ್ಲಿ ಆಪಲ್ ಸಂಸ್ಥೆಯ ಸಹಸ್ಥಾಪಕರಲ್ಲಿ ಜಾಬ್ಸ್ ಕೂಡಾ ಒಬ್ಬರು. ಆದರೆ,ಆರಂಭದ ದಿನಗಳಲ್ಲಿ ಬಾಹ್ಯ ಬೆಂಬಲ ಪಡೆದು ಸಂಸ್ಥೆಯನ್ನು ಮುನ್ನಡೆಸುವ ಸ್ಥಿತಿಯನ್ನು ಸಂಸ್ಥೆ ಹೊಂದಿತ್ತು.

1984ರಲ್ಲಿ ಜಾಬ್ಸ್ ಮ್ಯಾಷಿಂಟೋಷ್ ಪರಿಚಯಿಸಿದ ಮೇಲೆ, ಪರ್ಸನಲ್ ಕಂಪ್ಯೂಟರ್ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಉಂಟಾಯಿತು. ಆಪಲ್ ಕಂಪನಿ ಉತ್ತುಂಗವನ್ನು ಏರುವ ಸಮಯದಲ್ಲೆ ಜಾಬ್ಸ್ ಜಾಬ್ ಕಳೆದುಕೊಂಡಿದ್ದು ವಿಪರ್ಯಾಸ.

ನಂತರ ಸ್ವಂತದ್ದಾಗಿ ಆರಂಭಿಸಿದ ಕಂಪನಿ NeXT ಕಂಪ್ಯೂಟರ್ ಜೊತೆಗೆ ಲೂಕಸ್ ಫಿಲ್ಮ ಗ್ರಾಫಿಕ್ ಡಿವಿಷನ್ ಸೇರಿ ಪಿಕ್ಸಾರ್ ಆದ ಮೇಲೆ ಹಳೆ ಕಂಪನಿ ಆಪಲ್ ಮತ್ತೆ ಜಾಬ್ಸ್ ರತ್ತ ಗಮನ ಹರಿಸಿತು.

1996 ರಿಂದ ಒಂದೂವರ ದಶಕ ತನಕ ಜಾಬ್ಸ್ ಸೃಷ್ಟಿಸಿದ ಇಲೆಕ್ಟ್ರಾನಿಕ್ ಪರಿಕರಗಳಾದ ಐಮ್ಯಾಕ್, ಐಪೋಡ್, ಐಟ್ಯೂನ್ಸ್, ಐಫೋನ್ ಹಾಗೂ ಐಪ್ಯಾಡ್ ಭರ್ಜರಿ ಹಿಟ್ ಆದವು.

ಈಗ ಆಪಲ್ $326 ಬಿಲಿಯನ್ ಮೌಲ್ಯದಷ್ಟು ತೂಗುತ್ತದೆ. ಜಾಬ್ಸ್ ಆಪಲ್ ಸಿಇಒ ಸ್ಥಾನ ಬಿಟ್ಟರೂ ತಮ್ಮ ಛಾಪು ಮೂಡಿಸಿ, ಇತರರಿಗೆ ಮಾದರಿಯಾಗಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+