'ಜನಾರ್ದನ'ನ ಲೆಕ್ಕ: ಜನಾ ರೆಡ್ಡಿ ಅಧಿಕೃತ ಆಸ್ತಿ 378 ಕೋಟಿ ರೂಪಾಯಿ
ಬೆಂಗಳೂರು,
ಸೆ.28: ಬಳ್ಳಾರಿಯ ಗಣಿಧಣಿ ಗಾಲಿ ಜನಾರ್ದನ ರೆಡ್ಡಿ ಸಾವಿರಾರು ಕೋಟಿಗಳ ಒಡೆಯ. ಆದರೆ ಜನಾರ್ದನ ರೆಡ್ಡಿ ಕುಟುಂಬದ ಅಧಿಕೃತ ಆಸ್ತಿ ಎಷ್ಟು ಗೊತ್ತೇ? ಬರೀ 378.30 ಕೋಟಿ ರೂ. ಅಂದರೆ ಇದು ಪಕ್ಕ 'ಜನಾರ್ದನ'ನ ಲೆಕ್ಕ...! id="toptextpromo">ಸದ್ಯ
ಆಂಧ್ರದ ಜೈಲಿನಲ್ಲಿ ಮುದ್ದೆ ಮುರಿಯುತ್ತಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಲೋಕಾಯುಕ್ತಕ್ಕೆ ಸಲ್ಲಿಸಿರುವ 2010-11ನೇ ಸಾಲಿನ ಒಟ್ಟು ಆಸ್ತಿ ಮೌಲ್ಯವಿದು. ಜನಾರ್ದನ ರೆಡ್ಡಿ, ಪತ್ನಿ ಲಕ್ಷ್ಮಿ ಅರುಣಾ, ಮಕ್ಕಳಾದ ಕಿರಿಟಿ ಮತ್ತು ಬ್ರಹ್ಮಿಣಿ ಸೇರಿದಂತೆ ಇಡೀ ಕುಟುಂಬದ ಒಟ್ಟು ಆಸ್ತಿ ಮೊತ್ತ 378,30,77,581 ರೂ. ಲೋಕಾಯುಕ್ತಕ್ಕೆ ಜೂ. 23ರಂದು ಬರೋಬರಿ 38 ಪುಟಗಳ ತಮ್ಮ ಆಸ್ತಿ ವಿವರಗಳನ್ನು ರೆಡ್ಡಿ ಕುಟುಂಬ ಸಲ್ಲಿಸಿದೆ. id='are-slot-1' class='oiad oi-axt oiadv'> id='top-searched-articles'>ಇದರಲ್ಲಿ
ತಮ್ಮ ಮತ್ತು ಪತ್ನಿ, ಮಕ್ಕಳ ಹೆಸರಿನಲ್ಲಿರುವ ಅಧಿಕೃತ ಬ್ಯಾಂಕ್ ಖಾತೆಗಳು, ನಗದು, ಠೇವಣಿ, ಷೇರು-ವಿಮೆ, ಬಂಡವಾಳ ಹೂಡಿಕೆ, ಕಂಪನಿಗಳು, ಚಿನ್ನಾಭರಣ, ಜಮೀನು, ಸಾಲ, ಕಟ್ಟಡ ಸೇರಿದಂತೆ ಎಲ್ಲ ಮೂಲಗಳಿಂದ ಬಂದಿರುವ ಆದಾಯ ಮತ್ತು ಆಸ್ತಿ ವಿವರಣೆ ನೀಡಲಾಗಿದೆ. ರೆಡ್ಡಿ ಕುಟುಂಬ ಘೊಷಣೆ ಮಾಡಿರುವ ಆಸ್ತಿಗಳ ಲೆಕ್ಕಾಚಾರದಲ್ಲಿ ಸಾಕಷ್ಟು ಗಮನಾರ್ಹ ಮತ್ತು ಸ್ವಾರಸ್ಯಕರ ಅಂಶಗಳನ್ನು ಗಮನಿಸಬಹುದು. 'ಉದಯವಾಣಿ' ದಿನಪತ್ರಿಕೆಯಲ್ಲಿ ಈ ಕುರಿತು ಸವಿವರ ಮುಖಪುಟ ಲೇಖನವೊಂದು ಇಂದು ಪ್ರಕಟವಾಗಿದೆ.











Click it and Unblock the Notifications