ಜನಾ ರೆಡ್ಡಿಯ ತಲೆ ಮೇಲೂ ಇದೆಯಂತೆ 43 ಕೋಟಿ ಸಾಲ!
ಬೆಂಗಳೂರು,
ಸೆ.28: ಏನು ತಲೆಬರೆಹ ನೋಡಿ, ರೆಡ್ಡಿಗೂ ಇತ್ತಾ ಸಾಲದ ಕಾಟ ಎಂದು ಆಶ್ಚರ್ಯಕ್ಕೆ ಬೀಳಬೇಡಿ. ರೆಡ್ಡಿ ಕುಟುಂಬದ ಆಸ್ತಿ ಲೆಕ್ಕಾಚಾರದಲ್ಲಿ ಬಹಳ ಸ್ವಾರಸ್ಯಕರ ವಿಚಾರ ಅಂದರೆ, ಗಂಡನಿಗೆ ಹೆಂಡತಿ ಮತ್ತು ಹೆಂಡತಿಗೆ ಗಂಡ ಕೋಟಿ ಸಾಲ ಕೊಟ್ಟಿರುವುದು. ಅಷ್ಟೇಅಲ್ಲ ಇವರಿಬ್ಬರು ಕೋಟ್ಯಂತರ ರೂ. ಸಾಲಗಾರರು ಹೌದು. id="toptextpromo">2010ರಲ್ಲಿ
ಪತ್ನಿ ಲಕ್ಷ್ಮಿ ಅರುಣ, ಪತಿ ಜನಾರ್ದನ ರೆಡ್ಡಿಗೆ 1.83 ಕೋಟಿ ರೂ. ಸಾಲ ಕೊಟ್ಟಿದ್ದಾರೆ. ಅದೇರೀತಿ ರೆಡ್ಡಿ ಕೂಡ ಪತ್ನಿ ಒಡೆತನದ ಕಂಪನಿಗಳಿಗೆ ಸುಮಾರು 8 ಕೋಟಿಗೂ ಅಧಿಕ ಮೊತ್ತ ಸಾಲ ಕೊಟ್ಟಿದ್ದಾರೆ. ಅಲ್ಲದೆ ಇಬ್ಬರು ಕೂಡ ತಮ್ಮದೇ ಮಾಲಿಕತ್ವದ ಕಂಪನಿಗಳಿಗೆ ಮತ್ತು ಆಪ್ತರಿಗೆ ಒಟ್ಟು 11.27 ಕೋಟಿ ರೂ. ಸಾಲ ಕೊಟ್ಟಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಇನ್ನೊಂದೆಡೆ,
ಇಬ್ಬರು ಬೇರೆಯವರಿಂದಲೂ ಸಾಲ ಪಡೆದುಕೊಂಡಿದ್ದಾರೆ. ಸದ್ಯಕ್ಕೆ ಜನಾರ್ದನ ರೆಡ್ಡಿಗೆ 23.09 ಕೋಟಿ ಮತ್ತು ಲಕ್ಷ್ಮಿ ಅರುಣಾಗೆ 20.35 ಕೋಟಿ ರೂ. ಸಾಲ ಇದೆ. ರೆಡ್ಡಿ ದಿನ ಬೆಳಗಾದರೆ ಹೆಲಿಕಾಪ್ಟರಿನಲ್ಲಿ ಓಡಾಡುತ್ತಿದ್ದರು. ಅಷ್ಟೇಅಲ್ಲ ರಸ್ತೆಯಲ್ಲಿ ಸಂಚರಿಸುವುದಾದರೆ ಕೋಟ್ಯಂತರ ಬೆಲೆ ಐಷಾರಾಮಿ ಕಾರಲ್ಲಿ ಸಂಚರಿಸುತ್ತಿದ್ದರು. ತಮಾಷೆ ಅಂದರೆ ರೆಡ್ಡಿ ಕುಟುಂಬದ ಬಳಿ ಅಧಿಕೃತವಾಗಿ ಇರುವುದು ಒಂದೇ ಒಂದು ಮಿಟ್ಸುಬಿಷಿ ಲ್ಯಾನ್ಸರ್ ಕಾರು ಮಾತ್ರ.











Click it and Unblock the Notifications