ಸೇನೆ ದುಡ್ಡಿನಲ್ಲಿ ಪತ್ನಿಗೆ ಬ್ಲೌಸ್ ಕೊಡಿಸಿದ ಲೆ. ಜನರಲ್

ತನ್ನ ಪತ್ನಿಯ ಬೇಡಿಕೆಯಂತೆ ಸೇನೆಗೆ ಸೇರಿದ ದುಡ್ಡಿನಲ್ಲಿ ಬ್ಲೌಸ್, ಸೀರೆ, ಹೇರ್ ಡ್ರೆಸ್ಸಿಂಗ್ ಸಾಮಗ್ರಿ, ಕೆಲವೊಂದು ಉಡುಗೊರೆಗಳನ್ನು ಕೊಡಿಸಿ ಸಿಕ್ಕಿ ಹಾಕಿಕೊಂಡಿದ್ದಾನೆ. ಈತ ದುರುಪಯೋಗ ಪಡಿಸಿಕೊಂಡ ಸೇನೆಯ ಹಣ 23ಸಾವಿರ ರೂಪಾಯಿ ಮಾತ್ರ.
ಅಸ್ಸಾಂ ರೈಫಲ್ಸ್ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ರಾಮೇಶ್ವರ್ ರೈ ಹಣ ದುರುಪಯೋಗ ಪಡಿಸಿಕೊಂಡ ಸೇನಾಧಿಕಾರಿ. ಈತನ ಮೇಲೆ ಪುರಾವೆ ಸಮೇತ ಆರೋಪ ಮಾಡಿರುವ ಇತರ ಅಧಿಕಾರಿಗಳು ಹಣ ಎಷ್ಟೇ ಇರಲಿ ಸ್ವಂತಕ್ಕೆ ಉಪಯೋಗಿಸಿಕೊಂಡಿದ್ದು ತಪ್ಪು ಎನ್ನುತ್ತಾರೆ ಆತನ ಸಹದ್ಯೋಗಿಗಳು.
ಇವರ ದೂರನ್ನು ಆಧರಿಸಿ ಸೇನಾ ಮುಖ್ಯಸ್ಥ ಜನರಲ್ ವಿ ಕೆ ಸಿಂಗ್ ಗೃಹ ಕಾರ್ಯದರ್ಶಿಯವರಿಗೆ ಪತ್ರ ಬರೆದು ರಾಮೇಶ್ವರ್ ರೈ ಅವರ ಮೇಲೆ ಕ್ರಮ ತೆಗೆದುಕೊಳ್ಳಲು ಒಪ್ಪಿಗೆ ಸೂಚಿಸಿದ್ದಾರೆಂದು ವರದಿಯಾಗಿದೆ.












Click it and Unblock the Notifications