ಬಾಲಕೃಷ್ಣೇಗೌಡರ ಅಕ್ರಮ ಆಸ್ತಿ ಗಳಿಕೆ ದೂರಿನ ಸಾರವೇನು?
ಬೆಂಗಳೂರು,
ಸೆ.23: ದೊಡ್ಡಗೌಡರ ಪುತ್ರ ಬಾಲಕೃಷ್ಣೇಗೌಡರ ಅಕ್ರಮ ಆಸ್ತಿ ಗಳಿಕೆ ದೂರಿನ ಸಾರಾಂಶ ಹೀಗಿದೆ: ಎಚ್.ಡಿ. ಬಾಲಕೃಷ್ಣೇಗೌಡ 1984ರಿಂದ 2005ರವರೆಗೆ ಕೆಎಎಸ್ ಅಧಿಕಾರಿಯಾಗಿದ್ದರು. ಅವರ ಸೇವಾ ಅವಧಿಯ ಒಟ್ಟು ಆದಾಯ (ವೇತನ) 30 ಲಕ್ಷ ರೂ. ಆಗಿರುತ್ತದೆ. 2005ರಲ್ಲಿ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದುಕೊಂಡ ಅವರು, ಆ ಸಮಯದಲ್ಲಿ ಒಟ್ಟು 77ಕೋಟಿ ರೂ. ಮೊತ್ತದ ಆಸ್ತಿ ಖರೀದಿಸಿದ್ದರು. id="toptextpromo">ಸದರಿ
ಆಸ್ತಿಯ ವೌಲ್ಯ ಪ್ರಸ್ತುತ ಸುಮಾರು 250-300 ಕೋಟಿ ರೂ.ಗಿಂತ ಅಧಿಕವಾಗಿದೆ. ಆಸ್ತಿ ಖರೀದಿ ಹಾಗೂ ಆಸ್ತಿಯ ಈಗಿನ ವೌಲ್ಯಕ್ಕೆ ಸಂಬಂಧಪಟ್ಟಂತೆ ಕ್ರಯಪತ್ರ ಲಭ್ಯವಿದೆ. ಅವರು ಇಷ್ಟು ಮೊತ್ತದ ಆಸ್ತಿಯನ್ನು ತಮ್ಮ ಪತ್ನಿ ಕವಿತಾ, ಅತ್ತೆ ಜಯಮ್ಮ, ಪತ್ನಿ ಸಹೋದರಿ ಸವಿತಾ ಹಾಗೂ ಸಹೋದರರಾದ ರವೀಂದ್ರ, ಶ್ರೀಕಾಂತ್ ಹೆಸರಲ್ಲಿ ಖರೀದಿ ಮಾಡಿದ್ದಾರೆ ಎಂದು ನ್ಯಾಯಾಲಯಕ್ಕೆ ದೂರುದಾರ ಹೇಳಿಕೆ ನೀಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಬಾಲಕೃಷ್ಣೇ
ಗೌಡರು ಇಷ್ಟು ಮೊತ್ತದ ಆಸ್ತಿಯನ್ನು ಅಕ್ರಮವಾಗಿ ಗಳಿಸಿದ್ದಾರೆ. ಇದೊಂದು ಗಂಭೀರ ಅಪರಾಧವಾಗಿದ್ದು, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಸೆಕ್ಷನ್ 13(1)(ಇ) ಅಡಿ ತಮ್ಮ ದೂರನ್ನು ದಾಖಲಿಸಿಕೊಂಡು ಸಕ್ಷಮ ಸಂಸ್ಥೆಗೆ ಪ್ರಕರಣದ ತನಿಖೆ ವಹಿಸುವುದರ ಜೊತೆಗೆ ಎಚ್.ಡಿ. ಬಾಲಕೃಷ್ಣ ಅವರ ಆಸ್ತಿ ಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ದೂರುದಾರ ನ್ಯಾಯಾಲಯವನ್ನು ಕೋರಿದರು.











Click it and Unblock the Notifications