ದೊಡ್ಡಗೌಡರ ಪುತ್ರ ಬಾಲಕೃಷ್ಣೇಗೌಡಗೂ ಲೋಕಾಯುಕ್ತ ಭೀತಿ

ಇಂತಿಪ್ಪ ಬಾಲಕೃಷ್ಣೇ ಗೌಡರು ಕೆಎಎಸ್ ಅಧಿಕಾರಿಯಾಗಿದ್ದ ಕಾಲದಲ್ಲಿ ತಮ್ಮ ಆದಾಯಕ್ಕಿಂತ ನೂರುಪಟ್ಟು ಹೆಚ್ಚಿನ ಮೊತ್ತದ ಆಸ್ತಿಯನ್ನು ಅಕ್ರಮವಾಗಿ ಖರೀದಿಸಿದ್ದಾರೆಂದು ಆರೋಪಿಸಿ ಭದ್ರಾವತಿ ನಿವಾಸಿ ಎಸ್. ಎನ್. ಬಾಲಕೃಷ್ಣ ಎಂಬವರು ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಗುರುವಾರ ಖಾಸಗಿ ಮೊಕದ್ದಮೆ ದಾಖಲಿಸಿದ್ದಾರೆ.
ಭ್ರಷ್ಟಾಚಾರ ಮುಕ್ತ ಸಮಾಜದ ಆಶಯ: ಖಾಸಗಿ ದೂರನ್ನು ದಾಖಲಿಸುವುದರ ಹಿಂದೆ ರಹಸ್ಯ ಅಜೆಂಡಾ ಏನಾದರೂ ಇದೆಯಾ!? ಎಂದು ನ್ಯಾಯಾಧೀಶ ನ್ಯಾ.ಎನ್.ಕೆ. ಸುದೀಂದ್ರ ರಾವ್ ಅವರು ದೂರು ದಾಖಲಿಸಿಕೊಳ್ಳುವ ವೇಳೆ ದೂರುದಾರರನ್ನು ಕೇಳಿದರು. ಅದಕ್ಕೆ ದೂರುದಾರ ಬಾಲಕೃಷ್ಣ ಅವರು 'ನಾನು ನಿವೃತ್ತ ಸರಕಾರಿ ಉದ್ಯೋಗಿ. ಭದ್ರಾವತಿಯ ವಿಶ್ವೇಶ್ವರಯ್ಯ ಸ್ಟೀಲ್ ಮತ್ತು ಐರನ್ ಲಿಮಿಟೆಡ್‌ನಲ್ಲಿ ಸಹಾಯಕ ವ್ಯವಸ್ಥಾಪಕನಾಗಿದ್ದೆ. ಪ್ರಾಮಾಣಿಕತೆ ಹಾಗೂ ಪರಿಶುದ್ಧತೆಯಿಂದ ಸಾರ್ವಜನಿಕರ ಸೇವೆ ಸಲ್ಲಿಸಿದ್ದು, ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣವೇ ನನ್ನ ಆಶಯವಾಗಿದೆ. ಈ ಹಿನ್ನೆಲೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದೇನೆ. ಇದನ್ನು ಹೊರತುಪಡಿಸಿ ಬೇರೆ ಯಾವುದೇ ದುರುದ್ದೇಶವಿಲ್ಲ' ಎಂದು ವಿನಮ್ರವಾಗಿ ಉತ್ತರಿಸಿದರು.
ದೂರಿಗೆ ಸಂಬಂಧಪಟ್ಟಂತೆ ದೂರುದಾರ ಬಾಲಕೃಷ್ಣ ಹೇಳಿಕೆ ಪಡೆದುಕೊಂಡ ವಿಶೇಷ ನ್ಯಾಯಾಲಯ, ಸೆ. 24ರಂದು ದೂರು ಉರ್ಜಿತವೇ ಅಥವಾ ಅನೂರ್ಜಿತವೇ ಎಂಬುದರ ಕುರಿತು ತೀರ್ಪು ಹೊರಡಿಸುವುದಾಗಿ ಆದೇಶಿಸಿದ್ದಾರೆ.












Click it and Unblock the Notifications