ಮೋದಿ ಸೆ.17ರಿಂದ ಉಪವಾಸ ಕುಳಿತುಕೊಳ್ತಾರಂತೆ

ಸುಪ್ರೀಂಕೋರ್ಟ್ ತೀರ್ಪಿನ ಕುರಿತು ಮಂಗಳವಾರ ಪ್ರತಿಕ್ರಿಯೆ ನೀಡಿರುವ ಮೋದಿ, ನನ್ನ ಮತ್ತು ರಾಜ್ಯದ ವಿರುದ್ಧ ಹಲವು ವರ್ಷಗಳಿಂದ ನಡೆಯುತ್ತಿದ್ದ ಸಲ್ಲದ ಟೀಕೆಗಳಿಗೆ ಸೂಕ್ತ ಉತ್ತರ ಸಿಕ್ಕಿದೆ. 2002ರ ದಂಗೆಯ ನಂತರ ಮೋದಿ ಮತ್ತು ಗುಜರಾತ್ ಸರ್ಕಾರದ ಬಗ್ಗೆ ಟೀಕಿಸುವುದು ಕೆಲವರಿಗೆ ಫ್ಯಾಷನ್ ಆಗಿತ್ತು ಎಂದು ಕಿಡಿಕಾರಿದ್ದಾರೆ.
ಸೋಮವಾರದ ತೀರ್ಪಿನ ಹಿನ್ನೆಲೆಯಲ್ಲಿ ಮೋದಿ ರಾಜ್ಯದ ಜನರಿಗೆ ನಾಲ್ಕು ಪುಟಗಳ ಬಹಿರಂಗ ಪತ್ರ ಬರೆದಿದ್ದಾರೆ. ಈ 3 ದಿನಗಳ ಉಪವಾಸ ಆಂದೋಲನ ಗುಜರಾತ್‌ನಲ್ಲಿ ಶಾಂತಿ, ಏಕತೆ ಮತ್ತು ಸೌಹಾರ್ದತೆಯನ್ನು ಬಲಪಡಿಸಲಿದೆ ಎಂದು ಅವರು ಆಶಿಸಿದ್ದಾರೆ.
ಕಾಂಗ್ರೆಸ್ ನಾಯಕರು ಮಾತ್ರ ಮೋದಿಯವರ ಉಪವಾಸವನ್ನು ಗಿಮಿಕ್ ಎಂದು ಜರಿದಿದ್ದು, ಗುಜರಾತ್ ಗಲಭೆಗಾಗಿ ಜನರ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದೆ. ಆದರೆ 'ಸುಪ್ರೀಂಕೋರ್ಟ್ ತೀರ್ಪನ್ನು ಕೆಲವರು ಸೋಲೆಂದು, ಇನ್ನ ಕೆಲವರು ಗೆಲವೆಂದು ಬಣ್ಣಿಸಿದ್ದಾರೆ. ಎಲ್ಲರಿಗೂ ಅವರದೇ ಆದ ಅಭಿಪ್ರಾಯಗಳಿರುತ್ತದೆ' ಎಂದು ಮೋದಿ ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications