ನರೇಂದ್ರ ಮೋದಿ ಬಹಿರಂಗ ಪತ್ರದಲ್ಲಿ ಏನೆಲ್ಲಾ ಇದೆ?

modi-open-letter-citizens-fast-sadbhavana-mission
ಅಹಮದಾಬಾದ್, ಸೆ.14: ಸೋಮವಾರದ ತೀರ್ಪಿನ ಹಿನ್ನೆಲೆಯಲ್ಲಿ ಮೋದಿ ರಾಜ್ಯದ ಜನರಿಗೆ ನಾಲ್ಕು ಪುಟಗಳ ಬಹಿರಂಗ ಪತ್ರ ಬರೆದಿದ್ದಾರೆ. ಅದರ ಪ್ರಮುಖ ಅಂಶಗಳು ಹೀಗಿವೆ:

ಸುಪ್ರೀಂಕೋರ್ಟ್‌ ತೀರ್ಪಿನಿಂದ ಒಂದು ಅಂಶವಂತೂ ಸ್ಪಷ್ಟವಾಗಿದೆ. 2002ರ ದಂಗೆಯ ನಂತರ ನನ್ನ ಮತ್ತು ಗುಜರಾತ್‌ ಸರ್ಕಾರದ ವಿರುದ್ಧ ಕೇಳಿಬರುತ್ತಿದ್ದ ಸುಳ್ಳು. ಆರೋಪಗಳು ಇನ್ನಾದರೂ ನಿಲ್ಲಲೇಬೇಕು. ಕಳೆದ 10 ವರ್ಷಗಳಿಂದ ನನ್ನ ಮತ್ತು ಗುಜರಾತ್‌ ಸರ್ಕಾರದ ವಿರುದ್ಧ ದೂರುವುದು ಕೆಲವರಿಗೆ ಫ್ಯಾಷನ್‌ ಆಗಿ ಹೋಗಿತ್ತು.

ಕೆಲವರು ನನ್ನನ್ನು ವಿರೋಧಿಸಲು ಸಾಧ್ಯವಿದ್ದ ಎಲ್ಲಾ ತಂತ್ರಗಳನ್ನು ಉಪಯೋಗಿಸಿದರು. ಆದರೆ ಸುಪ್ರೀಂಕೋರ್ಟ್‌ನ ತೀರ್ಪಿನ ಬಳಿಕವೂ ಇಂತಹ ಟೀಕೆಗಳು ನಿಲ್ಲುತ್ತವೆ ಎಂಬ ಭರವಸೆಯೇನಿಲ್ಲ. ಆದರೆ ಒಂದು ಅಂಶವಂತೂ ಖಚಿತ. ನನ್ನ ಮತ್ತು ಸರ್ಕಾರದ ವಿರುದ್ಧ ವೃಥಾ ಟೀಕೆ ಮಾಡುತ್ತಿದ್ದವರ ಸಾಚಾತನಕ್ಕೆ ಪೆಟ್ಟು ಬಿದ್ದಿದೆ, ಅದು ಮತ್ತಷ್ಟು ಅದಃಪತನ ಕಂಡಿದೆ. ದೇಶದ ಜನ ಇನ್ನು ಮುಂದೆ ಇಂತಹ ಶಕ್ತಿಗಳನ್ನು ನಂಬಲಾರರು.

ಸದ್ಯಕ್ಕೆ ನನ್ನ ಮುಂದಿರುವ ಸವಾಲು, ಸಾಮಾಜಿಕ ಸೌಹಾರ್ದತೆ ಮತ್ತು ಸಹೋದರತ್ವವನ್ನು ಬಲಪಡಿಸುವುದಾಗಿದೆ. ಹೀಗಾಗಿ ರಾಜ್ಯದಲ್ಲಿ ಸದ್ಭಾವನ ಆಂದೋಲನ ಕೈಗೊಳ್ಳಲು ನಿರ್ಧರಿಸಿದ್ದೇನೆ. ಈ ಆಂದೋಲನದ ಅಂಗವಾಗಿ ಸೆ.17ರಿಂದ 3 ದಿನ ಉಪವಾಸ ಕೈಗೊಳ್ಳಲಿದ್ದೇನೆ. ಈ ಉಪವಾಸ ಗುಜರಾತ್‌ನಲ್ಲಿ ಶಾಂತಿ, ಏಕತೆ ಮತ್ತು ಸೌಹಾರ್ದತೆಯನ್ನು ಬಲಪಡಿಸಲಿದೆ ಎಂದು ನಂಬಿದ್ದೇನೆ.

ದ್ವೇಷವನ್ನು ದ್ವೇಷದಿಂದ ಹತ್ತಿಕ್ಕಲಾಗದು ಎಂಬ ಪ್ರಸಿದ್ಧ ಮಾತೊಂದಿದೆ. ನಮ್ಮ ದೇಶದ ನಿಜವಾದ ಶಕ್ತಿ ಏಕತೆ ಮತ್ತು ಸೌಹಾರ್ದತೆ. ಏಕತೆಯೇ ಭವಿಷ್ಯದ ಭಾರತದ ಮಾರ್ಗದರ್ಶಕ. ಹೀಗಾಗಿ ಜನರಲ್ಲಿ ಏಕತೆ ಮೂಡಿಸುವುದು ನಮ್ಮೆಲ್ಲರ ಕರ್ತವ್ಯ.

ಒಂದು ಸದುದ್ದೇಶದಿಂದ ಮುನ್ನಡೆಯುವ ಸುವರ್ಣಾವಕಾಶವನ್ನು ನಾವು ಪಡೆದಿದ್ದೇವೆ. ಈ ಆಂದೋಲನದಲ್ಲಿ ಭಾಗವಹಿಸುವ ಮೂಲಕ ಜನ ರಾಜ್ಯದ ಗೌರವ ಹೆಚ್ಚುವಂತೆ ಮಾಡಬೇಕು. ಈ ಯಾತ್ರೆ ಸಂಪೂರ್ಣವಾಗಿ ಸಮಾಜ ಮತ್ತು ರಾಷ್ಟ್ರಕ್ಕೆ ಸೇರಿದ್ದು. ಈ ಆಂದೋಲನ ಮೂಲಕ ಗುಜರಾತ್‌ ರಾಜ್ಯವನ್ನು ಮತ್ತಷ್ಟು ಖ್ಯಾತಿಯ ಉತ್ತುಂಗಕ್ಕೇರಿಸುವ ನಮ್ಮ ಕ್ರಮ ದೇಶದ ಅಭಿವೃದ್ಧಿಗೂ ಕಾರಣವಾಗಲಿದೆ ಎಂಬ ವಿಶ್ವಾಸವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+