ಅಮೆರಿಕ ನೀತಿ ನಿರೂಪಕರಿಗೆ ಪ್ರೇರಕವಾದ ಮೋದಿ ಆಡಳಿತ

modi-governance-praised-by-us-congress
ವಾಷಿಂಗ್ಟನ್, ಸೆ.14: ಅಮೆರಿಕ ಕಾಂಗ್ರೆಸ್ ನ ಸಂಶೋಧನಾ ಸೇವೆ ವರದಿ ಸಾರಾಂಶ ಹೀಗಿದೆ: ಮೋದಿ ಸಾರಥ್ಯದ ಗುಜರಾತ್ ರಾಷ್ಟ್ರೀಯ ಆರ್ಥಿಕ ಪ್ರಗತಿಗೆ ಪ್ರಧಾನ ಪ್ರೇರಕ ಶಕ್ತಿಯಾಗಿದೆ. ಇದೇ ವೇಳೆ ಬಿಹಾರ ಮತ್ತು ಆ ರಾಜ್ಯದ ಮುಖ್ಯಮಂತ್ರಿ ನಿತೀಶ್ ಕುಮಾರ್ ನಂತರದ ಸ್ಥಾನ ಅಲಂಕರಿಸಿದ್ದಾರೆ.

US CRS ಅಮೆರಿಕದ ಸ್ವತಂತ್ರ ವಿಭಾಗ. ಈ ವಿಭಾಗವು ಅಮೆರಿಕದ ಕಾನೂನು ನಿರೂಪಕರಿಗೆ ನೆರವಾಗಲು ಕಾಲಕಾಲಕ್ಕೆ ಅಮೆರಿಕಕ್ಕೆ ಆಸಕ್ತಿದಾಯಕವಾಗಿರುವ ವರದಿಗಳನ್ನು ಸಿದ್ಧಪಡಿಸುತ್ತಿರುತ್ತದೆ. ಈ ನಿಟ್ಟಿನಲ್ಲಿ, ಸೆಪ್ಟೆಂಬರ್ 1ರಂದು US CRS ವಿಭಾಗವು ಭಾರತದ ಕುರಿತು 94 ಪುಟಗಳ ವರದಿ ಸಿದ್ಧಪಡಿಸಿ, ಬುಡಗಡೆ ಮಾಡಿದೆ.

2002ರ ಗುಜರಾತ್ ಗಲಭೆಗಳಿಂದ ಹೊರಬರುವ ನಿಟ್ಟಿನಲ್ಲಿ ಸಾಕಷ್ಟು ಶ್ರಮವಹಿಸಿದ ಮುಖ್ಯಮಂತ್ರಿ ಮೋದಿ, ರಸ್ತೆ, ವಿದ್ಯುತ್ ಕ್ಷೇತ್ರಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ.

ಪ್ರಧಾನ ಅಂತಾರಾಷ್ಟ್ರೀಯ ಹೂಡಿಕೆ ಸಂಸ್ಥೆಗಳಾದ ಜನರಲ್ ಮೋಟಾರ್ಸ್ ಮತ್ತು ಮಿಟ್ಸುಬಿಷಿ ಅಂತಹ ಕಂಪನಿಗಳಿಗೆ ರೆಡ್ ಕಾರ್ಪೆಟ್ ಹಾಸುವ ಮೂಲಕ ಇತ್ತೀಚಿನ ವರ್ಷಗಳಲ್ಲಿ ಅವರು ಶೇ. 11ಕ್ಕಿಂತ ಹೆಚ್ಚು ವಾರ್ಷಿಕ ಪ್ರಗತಿಯನ್ನು ಕಾಯ್ದುಕೊಂಡಿದ್ದಾರೆ. ಹಾಗೆ ನೋಡಿದರೆ, ಭಾರತದ ಜನಸಂಖ್ಯೆಯಲ್ಲಿ ಗುಜರಾತ್ ಪಾಲು ಶೇ. 5ರಷ್ಟಿದೆ. ಆದರೆ ದೇಶದ ಒಟ್ಟು ರಫ್ತಿನಲ್ಲಿ 1/5 ಪಾಲು ನೀಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+