ಹವಾಲಾ ದಂಧೆಯಲ್ಲಿ ರೆಡ್ಡಿ; ಜಗನ್ ಸಂಬಂಧ ಸಾಬೀತು

ಈ ವಹಿವಾಟಿಗೆ ಹವಾಲಾ ಏಜೆಂಟ್ 3 ಕೋಟಿ ರೂ. ಕಮಿಷನ್ ಪಡೆದಿರುವುದು ಜನಾರ್ದನ ರೆಡ್ಡಿ ಮನೆಯಲ್ಲಿ ಪತ್ತೆಯಾದ ದಾಖಲೆಗಳಿಂದ ಬೆಳಕಿಗೆ ಬಂದಿದೆ. ಬಳ್ಳಾರಿಯಲ್ಲಿರುವ ರೆಡ್‌ಗೋಲ್ಡ್ ಹಾಗೂ ಐ2 ಗ್ಲೋಬಲ್ ಸಲ್ಯೂಷನ್ ಕಂಪನಿಗಳು ಆಂಧ್ರ ಮೂಲದ ದಿವಾಕರ್ ರೆಡ್ಡಿ ಎಂಬುವರ ಮಾಲೀಕತ್ವದಲ್ಲಿ ನೋಂದಣಿಯಾಗಿವೆ.
ಈ ದಿವಾಕರ್ ರೆಡ್ಡಿ ಜಗತಿ ಪಬ್ಲಿಕೇಷನ್ ಹಾಗೂ ಇಂದಿರಾ ಟೆಲಿವಿಷನ್ ಕಂಪನಿಗಳ ಆಡಳಿತ ಮಂಡಳಿಯಲ್ಲಿ ಪ್ರಭಾವಿ ನಿರ್ದೇಶಕರಾಗಿರುವ ರಾಮಕೃಷ್ಣ ರೆಡ್ಡಿಯ ಸಹೋದರ. ಪಿವಿಸಿ ಕಂಪನಿಯಿಂದ ವರ್ಗಾವಣೆಯಾಗಿರುವ 247 ಕೋಟಿ ರೂ. ಹಣ ಜಗತಿ ಪಬ್ಲಿಕೇಷನ್ ಖಾತೆಗೆ ಜಮಾ ಆಗಿದೆ. 2007ರಲ್ಲಿ ಈ ವಹಿವಾಟು ನಡೆದಿದೆ.
2007ರ ಆಗಸ್ಟ್‌ನಲ್ಲಿ ಜನಾರ್ದನ ರೆಡ್ಡಿ ಹವಾಲ ಏಜೆಂಟರನ್ನು ಸಂಪರ್ಕಿಸಿ ಅವರ ಮೂಲಕ ಪಿವಿಸಿ ಕಂಪನಿಗೆ 247 ಕೋಟಿ ರೂ. ತಲುಪಿಸಿದ್ದಾರೆ. ಈ ಹಣ ಮೂರೇ ದಿನದಲ್ಲಿ ರೆಡ್ ಗೋಲ್ಡ್ ಕಂಪೆನಿಗೆ ವರ್ಗಾವಣೆಯಾಗಿ, ಮಾರನೆ ದಿನವೇ ಜಗತಿ ಪಬ್ಲಿಕೇಷನ್ ಖಾತೆಗೆ ಜಮಾ ಆಗಿದೆ. ಇದು ಜಗನ್ ಉದ್ಯಮ ಸಾಮ್ರಾಜ್ಯ ಹಾಗೂ ಬಳ್ಳಾರಿ ರೆಡ್ಡಿಗಳ ನಡುವಿನ ಅಕ್ರಮ ಹಣಕಾಸು ವಹಿವಾಟಿಗೆ ಸಣ್ಣ ಉದಾಹರಣೆ ಎಂದು ಸಿಬಿಐ ಮೂಲಗಳು ಸ್ಪಷ್ಟಪಡಿಸಿವೆ.












Click it and Unblock the Notifications