ರೆಡ್ಡಿ ಜಾಮೀನು ವಿಚಾರಣೆ ಮುಂದಕ್ಕೆ; ಮಲೇಷ್ಯಾದತ್ತ ಸಿಬಿಐ

ಈ ಮಧ್ಯೆ, ರಡ್ಡಿ ಜಾಮೀನು ಅರ್ಜಿ ವಿಚಾರಣೆಯನ್ನು ಹೈದರಾಬಾದ್ ಸಿಬಿಐ ವಿಶೇಷ ನ್ಯಾಯಾಲಯ ಶುಕ್ರವಾರಕ್ಕೆ ಮುಂದೂಡಿದೆ. ತುರಂಗವಾಸ ಅವರಿಗೆ ಇನ್ನೂ ಅನಿವಾರ್ಯವಾಗಿದೆ.
ಬಳ್ಳಾರಿ ರೆಡ್ಡಿಯ ಅಕ್ರಮ ಸಾಮ್ರಾಜ್ಯದ ಜತೆಗೆ ನೆರೆಯ ಆಂಧ್ರದ ಮಾಜಿ ಮುಖ್ಯಮಂತ್ರಿ ದಿವಂಗತ ವೈ.ಎಸ್. ರಾಜಶೇಖರ ರೆಡ್ಡಿ ಪುತ್ರ ಸಂಸದ ಜಗನ್‌ಮೋಹನ್ ರೆಡ್ಡಿ ಹೆಸರು ತಳಕು ಹಾಕಿಕೊಂಡಿರುವುದು ದೃಢಪಟ್ಟಿದೆ ಎಂದು ಸಿಬಿಐ ಹೇಳಿದೆ.
ಜಗತಿ ಪಬ್ಲಿಕೇಷನ್, ಟಿನ್ ಮಾಲೀಕತ್ವದ ಜಗತಿ ಪಬ್ಲಿಕೇಷನ್ ಹಾಗೂ ಇಂದಿರಾ ಟೆಲಿವಿಷನ್ ಕಂಪನಿಯಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ 247 ಕೋಟಿ ರೂಪಾಯಿ ಹೂಡಿಕೆ ಮಾಡಿರುವ ಕುರಿತು ಸಿಬಿಐಗೆ ಸಾಕ್ಷ್ಯಾಧಾರಗಳು ಲಭ್ಯವಾಗಿವೆ. ಆದ್ದರಿಂದ ಮಂಗಳವಾರವೇ ಸಿಬಿಐನ ಒಂದು ತಂಡ ಮಲೇಷ್ಯಾ ತಲುಪಿಕೊಂಡಿದೆ.
ಈ ಹಣ ಮಲೇಷ್ಯಾ ಮೂಲದ ಪಿವಿಸಿ ರಿಯಲ್ ಎಸ್ಟೇಟ್ ಕಂಪನಿಯಿಂದ ಬಳ್ಳಾರಿಯಲ್ಲಿರುವ ರೆಡ್ ಗೋಲ್ಡ್ ಕಂಪನಿಗೆ ವರ್ಗಾವಣೆಯಾಗಿದ್ದು, ಅಲ್ಲಿಂದ ಜಗತಿ ಪಬ್ಲಿಕೇಷನ್ ಖಾತೆಗೆ ಜಮಾ ಆಗಿರುವ ದಾಖಲೆಗಳು ಲಭ್ಯವಾಗಿರುವ ಹಿನ್ನೆಲೆಯಲ್ಲಿ ಪಿವಿಸಿ ಕಂಪನಿಯ ವಹಿವಾಟು ಹಾಗೂ ಲೆಕ್ಕಪತ್ರಗಳನ್ನು ಪರಿಶೀಲಿಸಲು ಸಿಬಿಐ ತಂಡ ಮಂಗಳವಾರವೇ ಮಲೇಷಿಯಾಗೆ ತೆರಳಿದೆ.












Click it and Unblock the Notifications