ಸಿಬಿಐ ಜತೆ ರೆಡ್ಡಿ ಮನೆ ಜಾಲಾಡಿದ ಬಳ್ಳಾರಿ ಪೊಲೀಸರು ಏನನ್ನುತ್ತಾರೆ!?

reddy-bellary-house-what-local-police-say
ಬಳ್ಳಾರಿ, ಸೆ.7: ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಮನೆಯ ಮೇಲೆ ಸೋಮವಾರ ಬೆಳಗಿನ ಜಾವ ದಾಳಿ ನಡೆಸಿದ ಸಿಬಿಐ ಸಿಬ್ಬಂದಿ ರೆಡ್ಡಿ ಅವರ ಐಷಾರಾಮಿ ಬಂಗಲೆ ಮತ್ತು ಅಲ್ಲಿನ ವೈಭವ ಕಂಡು ದಂಗು ಬಡೆದಿದ್ದಾರೆ.

ಇಂದ್ರಲೋಕವನ್ನೇ ನಾಚಿಸುವಂತಹ ವೈಭವವನ್ನು ಒಳಗೊಂಡಿರುವ ಆ ಬೃಹತ್ ಬಂಗಲೆ, ಅದರ ಆವರಣದಲ್ಲಿ ಇರುವ ಪೀಠೋಪಕರಣಗಳು, ಹುಲ್ಲು ಹಾಸು, ನೆಲಹಾಸು, ಬೃಹದಾಕಾರದ ಕಂಬಗಳು, ಕಟ್ಟಡದ ವಿನ್ಯಾಸ, ಸುತ್ತಲೂ ಇರುವ ಕಾಂಪೌಂಡು, ಹಿಂಭಾಗದಲ್ಲಿರುವ ಗುಡ್ಡ, ಗಿಡ, ಮರಗಳು, ಹೂ, ಬಳ್ಳಿ, ಈಜುಕೊಳ ಅಬ್ಬಬ್ಬಾ!

ಚಿಕ್ಕದೊಂದು ಸಿನಿಮಾ ಥಿಯೇಟರ್, ಕೊಠಡಿಗಳಿಗೆಲ್ಲ ಹವಾನಿಯಂತ್ರಿತ ವ್ಯವಸ್ಥೆ, ಅಷ್ಟೇ ವೈಭವದಿಂದ ಕೂಡಿದ ದೇವರ ಕೋಣೆ ಮಾತ್ರವಲ್ಲದೇ ಹಲವು ಬಗೆಯ ಐಷಾರಾಮಿ ವಸ್ತುಗಳನ್ನು ನೋಡಿದ ಸಿಬಿಐ ಅಧಿಕಾರಿಗಳು ಬೆಕ್ಕಸ ಬೆರಗಾದರು.

ಸಿಬಿಐ ಸಿಬ್ಬಂದಿಗೆ ಭದ್ರತೆ ಒದಗಿಸಲೆಂದು ನಾವೂ ಮನೆಯೊಳಗೆ ತೆರಳಿದ್ದೆವು. ಆದರೆ ಇಲ್ಲಿದ್ದುಕೊಂಡೇ ಒಮ್ಮೆಯೂ ಅವರ ಮನೆಯೊಳಕ್ಕೆ ಕಾಲಿರಿಸಿರಲಿಲ್ಲ. ಈ ಐಭೋಗ ಕಂಡಿರಲಿಲ್ಲ. ಥ್ಯಾಂಕ್ಸ್ ಟು ಸಿಬಿಐ ನಮಗೂ ಒಂಚೂರು ದೈರ್ಯ ಬಂದು ಮನೆಯನ್ನೆಲ್ಲ ನೋಡಿದೆವು ಎಂದು ಸ್ಥಳೀಯ ಪೊಲೀಸ್ ಸಿಬ್ಬಂದಿಯೊಬ್ಬರು 'ಪ್ರಜಾವಾಣಿ' ಪತ್ರಿಕೆಗೆ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+