'ಕುಠೀರ' ಮನೆಯಲ್ಲ ರಾಜಕೋಟೆ: ಐಶ್ವರ್ಯ ವರ್ಣಿಸಲಸದಳ

ಜನಾರ್ದನ ರೆಡ್ಡಿ ವರ್ಷಕ್ಕೊಮ್ಮೆ ಮಾತ್ರ ತಮ್ಮ ಜನ್ಮದಿನದಂದು ನಗರದ ದುರ್ಗಮ್ಮ ದೇವಸ್ಥಾನಕ್ಕೆ ಅಭಿಷೇಕಕ್ಕೆ ತೆರಳಲು ಬಳಸುತ್ತಿದ್ದ ರೂ 4 ಕೋಟಿ ಮೌಲ್ಯದ ರೋಲ್ಸ್‌ರಾಯ್ ಕಾರು, ತಲಾ ಕೋಟಿ ಬೆಲೆ ಬಾಳುವ ಲ್ಯಾಂಡ್ ಕ್ರೂಸರ್, ರೇಂಜ್ ರೋವರ್, ಬಿಎಂಡಬ್ಲ್ಯೂ ಕಾರುಗಳನ್ನು ಕಂಡ ಸಿಬಿಐ ತಂಡ ಅವುಗಳನ್ನೂ ವಶಕ್ಕೆ ತೆಗೆದುಕೊಂಡಿದೆ.
ಸತತ ಮೂರು ವರ್ಷಗಳಿಂದ ನಿರ್ಮಿಸಲಾಗುತ್ತಿರುವ ಮನೆ ಎದುರಿನ ಕಾಂಪೌಂಡ್‌ನ ಎತ್ತರ, ಅದರ ವಿನ್ಯಾಸ, ಅದಕ್ಕೆ ತಗಲಿದ ವೆಚ್ಚ, ಮನೆಯಲ್ಲಿರುವ ಬೆಲೆ ಬಾಳುವ ಪೀಠೋಪಕರಣಗಳು ಹೀಗೆ ಪ್ರತಿಯೊಂದನ್ನೂ ಕಣ್ಣು ಮಿಟುಕಿಸದಂತೆ ನೋಡಿದ ಸಿಬಿಐ ಅಧಿಕಾರಿಗಳು, ಮಧ್ಯರಾತ್ರಿವರೆಗೂ ಆಸ್ತಿಯ ಲೆಕ್ಕಾಚಾರ ಹಾಕಿ, ಲಭ್ಯ ದಾಖಲೆಗಳನ್ನೆಲ್ಲ ಪರಿಶೀಲಿಸಿ, ಮರಳಿದರು ಎಂದು ಆ ಸಿಬ್ಬಂದಿ ಅತ್ಯಾಶ್ಚರ್ಯದಿಂದಲೇ ವಿವರಿಸಿದ್ದಾರೆ.
ಈ ಹಿಂದೆಯೂ ಅನೇಕ ಕಡೆ ದಾಳಿ ನಡೆಸಿರುವ ಆಂಧ್ರದ ಸಿಬಿಐ ಸಿಬ್ಬಂದಿ ಇಂತಹ ಐಷಾರಾಮಿ ಕಟ್ಟಡಗಳನ್ನು ಕಂಡಿದ್ದರೂ ಗಡಿಯಾಚೆಯೂ ಅಂಥದ್ದೇ ವೈಭವವನ್ನು ಕಂಡು ನಿಬ್ಬೆರಗಾಗಿದ್ದು ಜನಾರ್ದನರೆ ಡ್ಡಿ ಹೊಂದಿರುವ ಆಸ್ತಿಪಾಸ್ತಿಯ ಬಗ್ಗೆ ಕುತೂಹಲ, ಖೇದ ಮೂಡಿಸುತ್ತದೆ.












Click it and Unblock the Notifications