ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಗಾಲಿ' ಮನೆಯಲ್ಲಿತ್ತು 15 ಕೆಜಿ ಚಿನ್ನದ, ವಜ್ರಖಚಿತ ಸಿಂಹಾಸನ

By Srinath
|
Google Oneindia Kannada News

reddy-bellary-house-golden-chair-found-cbi
ಬಳ್ಳಾರಿ, ಸೆ.7: ಪ್ರಸ್ತುತ, ಚಂಚಲಗೂಡ ಜೈಲಿನಲ್ಲಿ ಎರಡನೇ ರಾತ್ರಿ ಕಳೆದಿರುವ ಕೈದಿ ನಂ. 697 ಅರ್ಥಾತ್ ಜನಾರ್ದನ ರೆಡ್ಡಿ ಎಂಬ ಅಕ್ರಮ ಗಣಿವೀರ ಬಳ್ಳಾರಿಯ ತಮ್ಮ 'ಕುಠೀರ' ನಿವಾಸದಲ್ಲಿ ಅಕ್ಷರಶಃ ಸುಖದ ಸುಪ್ಪತ್ತಿಗೆಯಲ್ಲಿ ಹೊರಳಾಡುತ್ತಿದ್ದರು.

ಇದನ್ನು ಕೇಳಿದ ನಾಡಿನ ಅಮಾಯಕ ಪ್ರಜೆ ಯಾರಪ್ಪನ ಮನೆ ಆಸ್ತಿ ಇದು? ನಮ್ಮ ನೈಸರ್ಗಿಕ ಸಂಪತ್ತು ಲೂಟಿ ಮಾಡಿ ಮಜಾ ಮಾಡಿದ್ದಾರೆ ಎಂದು ಗೋಳಾಡುತ್ತಿದ್ದಾನೆ. ಜೈಲಿನಲ್ಲಿರುವ ರೆಡ್ಡಿ ಕಿವಿಗೆ ಈ ಆರ್ತನಾದ ತಲುಪಿದ ಬಗ್ಗೆ ಇನ್ನೂ ವರದಿಗಳು ಬಂದಿಲ್ಲ.

ಸಿಬಿಐ ಡಿಐಜಿ ಲಕ್ಷ್ಮಿನಾರಾಯಣ ಅವರೇನೋ ರೆಡ್ಡಿಯನ್ನು ನಿದ್ದೆಯಿಂದ ವಕ್ಕಲೆಬ್ಬಸಿ ಸೀದಾ ಹೈದರಾಬಾದಿಗೆ ಕರೆದೊಯ್ದರು. ಆದರೆ ಇತ್ತ ಬಳ್ಳಾರಿಯಲ್ಲೇ ಉಳಿದ ಸಿಬಿಐ ಅಧಿಕಾರಿಗಳು ಮೆಲ್ಲಗೆ ಒಂದೊಂದೇ ಹೆಜ್ಜೆ ಎತ್ತಿಡುತ್ತಾ ಮನೆಯನ್ನೆಲ್ಲ ಜಾಲಾಡುವ ವೇಳೆಗೆ ಅಲ್ಲಿನ ರಾಜವೈಭೋಗವನ್ನು ಕಂಡು ತಲೆತಿರುಗಿದ್ದಂತೂ ಗ್ಯಾರಂಟಿ.

ಗಾಲಿ ರೆಡ್ಡಿ ತನ್ನ ಮನೆಯಲ್ಲಿ 15 ಕೆಜಿ ಚಿನ್ನದ, ವಜ್ರ ಖಚಿತ ಸಿಂಹಾಸನದಂತಹ ಕುರ್ಚಿಯಲ್ಲಿ ವಿರಾಜಮಾನರಾಗುತ್ತಿದ್ದರು. ಗುಡ್ಡದ ಪರಿಸರದಲ್ಲಿರುವ 'ಕುಠೀರ' ರಾಜ-ಮಹಾರಾಜರ ಕಾಲದ ವೈಭವವನ್ನು ನೆನಪಿಸುವಂತಿತ್ತು ಎಂದು ಸಿಬಿಐಗೆ ನೆರವಾಗಲು ರೆ್ಡಿ ಮನೆಯಲ್ಲಿ ಕಾಲಿಟ್ಟಿದ್ದ ಸ್ಥಳೀಯ ಪೊಲೀಸರು ಹೇಳಿದ್ದಾರೆ.

English summary
CBI team which raided Janardhan Reddy's Bellary House has found a golden chair found among many other valuables.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X