'ನಮ್ಮ ಮೆಟ್ರೋ'ಗೆ ಭಯೋತ್ಪಾದಕರ ಸ್ಕೆಚ್

ಏನಪಾ ಅಂದರೆ ... 2008ರ ಸರಣಿ ಬಾಂಬ್ ಸ್ಫೋಟ ಇನ್ನೂ ಜನಮನದಲ್ಲಿ ಕುಳಿತಿರುವಾಗಲೇ ರಾಷ್ಟ್ರೀಯ ಬೇಹು ಮೂಲಗಳ ಪ್ರಕಾರ ಭಯೋತ್ಪಾದಕರು 'ನಮ್ಮ ಮೆಟ್ರೋ' ಸ್ಟೇಷನ್ ಗಳನ್ನು ಉಡಾಯಿಸಲು ಸಂಚು ಹಾಕಿ ಕುಳಿತಿದ್ದಾರೆ ಎಂದು ತಿಳಿದುಬಂದಿದೆ.
ದೆಹಲಿಯಲ್ಲಿ ಪೊಲೀಸರು ಇತ್ತೀಚೆಗೆ ಶಂಕಿತ ಭಯೋತ್ಪಾದಕರನ್ನು ಸೆರೆ ಹಿಡಿದು, ವಿಚಾರಣೆಗೊಳಪಡಿಸಿದಾಗ ಈ ಆಘಾತಕಾರಿ ಸಂಗತಿ ಹೊರಬಿದ್ದಿದೆ. ಬೆಂಗಳೂರಿನ 'ನಮ್ಮ ಮೆಟ್ರೋ' ಸ್ಟೇಷನ್ ಗಳೂ ಸೇರಿದಂತೆ ಆಯಕಟ್ಟಿನ ಸ್ಥಳಗಳ ಚಿತ್ರಗಳು ಭಯೋತ್ಪಾದಕರ ಬಳಿ ಇದ್ದವು ಎಂದು ರಾಜ್ಯ ಸಚಿವಾಲಯದ ಮೂಲಗಳನ್ನು ಉದ್ದೇಶಿಸಿ ದೈನಿಕವೊಂದು ವರದಿ ಮಾಡಿದೆ.
ಈ ಭಯೋತ್ಪಾದಕ ಬೆದರಿಕೆ ಬಗ್ಗೆ ಗೃಹ ಸಚಿವಾಲಯದ ಅಧಿಕಾರಿಗಳು 'ನಮ್ಮ ಮೆಟ್ರೋ' ರೈಲ್ವೆ ಅಧಿಕಾರಿಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ಭಯೋತ್ಪಾದಕರ ಬಳಿಯಿದ್ದ ಚಿತ್ರಗಳನ್ನೂ ಅಧಿಕಾರಿಗಳಿಗೆ ರವಾನಿಸಿದ್ದು, ಅಧಿಕಾರಿಗಳು ಅದನ್ನು ಪರಿಶೀಲಿಸುತ್ತಿದ್ದಾರೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
ಬೆಂಗಳೂರಿನಲ್ಲಿ ಯಾವ ನಿಲ್ದಾಣಗಳಿಗೆಲ್ಲ ಭಯೋತ್ಪಾದಕ ಬೆದರಿಕೆಯಿದೆ ಎಂಬ ವಿವರವೂ ಲಭ್ಯವಾಗಿದೆ. ಮುಂದೆ ನೋಡಿ...












Click it and Unblock the Notifications