ಕೆಎಚ್ ರಸ್ತೆ ನಮ್ಮ ಮೆಟ್ರೋ ನಿಲ್ದಾಣಕ್ಕೆ ಉಗ್ರರ ಬೆದರಿಕೆ

ಭಯೋತ್ಪಾದಕರಿಂದ ವಶಪಡಿಸಿಕೊಂಡಿದ್ದ 'ನಮ್ಮ ಮೆಟ್ರೋ' ಸ್ಟೇಷನ್ ಗಳ ಫೋಟೋಗಳನ್ನು ತಾಳೆ ಹಾಕಿ ನೋಡಿದ್ದಾರೆ. 'ನಮ್ಮ ಮೆಟ್ರೋ' ನಿಗಮದ bmrc.co.in ವೆಬ್‌ಸೈಟ್‌ನಲ್ಲಿರುವ ಎಲ್ಲ ಸೂಕ್ಷ್ಮ ಮಾಹಿತಿಗಳನ್ನು ತಕ್ಷಣ ತೆಗೆದು ಹಾಕುವಂತೆಯೂ BMRC ಅಧಿಕಾರಿಗಳಿಗೆ ಆದೇಶಿಸಿದೆ.
ಇದೇ ವೇಳೆ, ಇತರೆ ಸಾರ್ವಜನಿಕ ಯೋಜನೆಗಳನ್ನು ನಿರ್ವಹಿಸುತ್ತಿರುವ ನಿಗಮಗಳಿಗೂ ಇಂತಹುದೇ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ. ವೆಬ್‌ಸೈಟ್ ಮತ್ತಿತರ ಸಾರ್ವಜನಿಕ ಮಾಧ್ಯಮಗಳಲ್ಲಿ ಚಿತ್ರಪಟಗಳನ್ನು ಪ್ರಕಟಿಸದಂತೆಯೂ NIA ತಾಕೀತು ಮಾಡಿದೆ.
ಅಂದಹಾಗೆ, ಸೆಪ್ಟೆಂಬರ್ 15ರಂದು 'ನಮ್ಮ ಮೆಟ್ರೋ' ಉದ್ಘಾಟನೆಗಾಗಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಔಪಚಾರಿಕವಾಗಿ ಆಹ್ವಾನಿಸಲು ಮುಖ್ಯಮಂತ್ರಿ ಸದಾನಂದ ಗೌಡರು ಇಂದು ದೆಹಲಿಗೆ ತೆರಳಿದ್ದಾರೆ.












Click it and Unblock the Notifications