Daily Horoscope: ಈ ರಾಶಿಯವರಿಗೆ ಆರ್ಥಿಕ ಲಾಭ, ಆದರೆ ಕಾಡಬಹುದು ಆರೋಗ್ಯ ಸಮಸ್ಯೆ
Horoscope May 2: ಶನಿವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯ ಇದಾಗಿದೆ. ಶನಿವಾರ ರಾಹುಕಾಲವು ಸಾಮಾನ್ಯವಾಗಿ ಬೆಳಿಗ್ಗೆ 9:00 ರಿಂದ 10:30 ರವರೆಗೆ ಇರುತ್ತದೆ. ಮೇ 2 ರ ದಿನ ಭವಿಷ್ಯ: 12 ರಾಶಿಗಳಿಗೆ ಇಂದಿನ ಸಂಪೂರ್ಣ ಭವಿಷ್ಯ, ಫಲಾಫಲ ಮಾಹಿತಿ ಹೇಗಿದೆ ಎಂಬ ಪೂರ್ಣ ವಿವರ ತಿಳಿಯಿರಿ.
ಮೇಷ ರಾಶಿ:
ನಿಮ್ಮ ಇಂದಿನ ದಿನ ಆತ್ಮವಿಶ್ವಾಸದಿಂದ ತುಂಬಿರುತ್ತದೆ. ಆದರೂ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಆತುರ ಮಾಡಬೇಡಿ. ಮಾತನಾಡುವಾಗ ಇನ್ನೊಬ್ಬರಿಗೆ ನೋವಾಗುವ ರೀತಿಯ ಪದ ಬಳಕೆ ಮಾಡದಿರಿ. ಆರ್ಥಿಕ ಲಾಭವಾಗುವುದು.

ವೃಷಭ ರಾಶಿ:
ನೀವು ಹಿಡಿದ ಕೆಲಸಗಳನ್ನು ಶಾಂತವಾಗಿ ಮತ್ತು ತಾಳ್ಮೆಯಿಂದ ಪೂರ್ಣಗೊಳಿಸುವಿರಿ.ಆರ್ಥಿಕ ಪರಿಸ್ಥಿತಿ ಸುಧಾರಿಸುವುದು. ಹೊಸ ಅವಕಾಶಗಳು ಒಲಿದು ಬರುವುದು. ಆದಾಯವು ಸ್ಥಿರವಾಗಿರುತ್ತದೆ.
ಮಿಥುನ ರಾಶಿ:
ಗುರುವು ನಿಮ್ಮ ರಾಶಿಯಲ್ಲಿದ್ದು, ಹೊಸ ಅವಕಾಶಗಳಿಗೆ ಬಾಗಿಲು ತೆರೆಯುವುದು. ಬೇರೆಯವರ ಜೊತೆ ಮಾತನಾಡುವ ವೇಳೆ ಎಚ್ಚರ ಇರಲಿ.ಕೆಲಸದಲ್ಲಿ ಹೊಸ ಜವಾಬ್ದಾರಿ ಹೆಗಲೇರಬಹುದು.
ಕರ್ಕಾಟಕ ರಾಶಿ:
ಕೆಲವೊಂದು ವಿಚಾರಗಳಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಕಷ್ಟವಾಗಬಹುದು. ಕೆಲಸದಲ್ಲಿ ತಾಳ್ಮೆ ಇದ್ದಷ್ಟು ಒಳ್ಳೆಯದು. ಕಠಿಣ ಪರಿಶ್ರಮವು ಫಲ ನೀಡುತ್ತದೆ. ವ್ಯವಹಾರದಲ್ಲಿ ಅಭಿವೃದ್ಧಿಯಾಗುವುದು.
ಸಿಂಹ ರಾಶಿ:
ವೃತ್ತಿಯಲ್ಲಿ ಏರಿಳಿತಗಳಾಗುವ ಸಾಧ್ಯತೆ ಇದೆ. ಶತ್ರುಗಳ ಬಗ್ಗೆ ಎಚ್ಚರ ಇರಲಿ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.
ಕನ್ಯಾ ರಾಶಿ:
ಕೈ ಹಾಕುವ ಕೆಲಸದಲ್ಲಿ ವಿಳಂಬವಾಗಬಹುದು. ಕಠಿಣ ಪರಿಶ್ರಮ ಹಾಕಿದರೆ ಯಶಸ್ಸು ಸಿಗಬಹುದು.ಬುದ್ದಿವಂತಿಕೆಯಿಂದ ಹಣ ಖರ್ಚು ಮಾಡಿ. ಪ್ರಯಾಣವನ್ನು ಮುಂದೂಡುವುದು ಉತ್ತಮ.
ತುಲಾ ರಾಶಿ:
ಅನಗತ್ಯ ವೆಚ್ಚಗಳು ಎದುರಾಗುವ ಸಾಧ್ಯತೆ ಇದೆ. ಆರೋಗ್ಯ ಸಮಸ್ಯೆಗಳು ಕಾಡಬಹುದು.ಸಂಬಂಧಗಳಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಿ.
ವೃಶ್ಚಿಕ ರಾಶಿ:
ಆರ್ಥಿಕ ಲಾಭವಾಗುವ ಸಾಧ್ಯತೆ ಇದೆ. ಕೆಲಸದ ಹೊರೆ ಹೆಚ್ಚಾಗುವುದು. ವ್ಯವಹಾರವು ಲಾಭವನ್ನು ತರುತ್ತದೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.
ಧನು ರಾಶಿ:
ಕೆಲಸದಲ್ಲಿ ಪ್ರಗತಿಯಾಗುವುದು. ಹೊಸ ಅವಕಾಶಗಳು ಒಲಿದು ಬರುವುದು. ಕುಟುಂಬದೊಂದಿಗೆ ಸಮಯ ಕಳೆಯುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.
ಮಕರ ರಾಶಿ:
ಪ್ರಮುಖ ಕಾರ್ಯವನ್ನು ಸಾಧಿಸುವ ಮೂಲಕ ಸಂತೋಷ ಸಿಗುವುದು. ವೃತ್ತಿಜೀವನವು ಸ್ಥಿರವಾಗಿರುತ್ತದೆ. ಆರ್ಥಿಕ ಲಾಭವಾಗುವ ಸಾಧ್ಯತೆ ಇದೆ. ಯಾವುದೇ ವಿಚಾರವಿರಲಿ ಆತುರದ ನಿರ್ಧಾರ ಬೇಡ.
ಕುಂಭ ರಾಶಿ:
ಖರ್ಚುಗಳು ಹೆಚ್ಚಾಗಬಹುದು. ನಿರೀಕ್ಷಿತ ಕೆಲಸಗಳು ವಿಳಂಬವಾಗುತ್ತವೆ. ಕೆಲಸದಲ್ಲಿ ಜಾಗರೂಕತೆ ಅತ್ಯಗತ್ಯ. ಪ್ರೇಮ ಸಂಬಂಧಗಳು ಸುಧಾರಿಸುತ್ತವೆ.
ಮೀನ ರಾಶಿ:
ಅನಗತ್ಯ ವೆಚ್ಚಗಳು ಎದುರಾಗುವ ಸಾಧ್ಯತೆ ಇದೆ. ಆದಾಯ ಹೆಚ್ಚಾಗುತ್ತದೆ. ಕೆಲಸದಲ್ಲಿ ಯಶಸ್ಸು ಸಿಗುತ್ತದೆ. . ಶುಭ ಕಾರ್ಯಕ್ರಮದಲ್ಲಿ ಭಾಗವಹಿಸಲು ಉತ್ತಮ ಅವಕಾಶ ಸಿಗುತ್ತದೆ.
(ಬರಹ: ರಂಜಿತಾ ಆರ್.ಕೆ.)












Click it and Unblock the Notifications