ಮಗಳ ಮೇಲೆ ಅತ್ಯಾಚಾರವೆಸಗಿದ ತಂದೆಗೆ ಬಿಡುಗಡೆ

ಇವರಿಬ್ಬರ ಬಗ್ಗೆ ಪೊಲೀಸರು ಸಾಕಷ್ಟು ಸಾಕ್ಷಾಧಾರಗಳನ್ನು ಕೋರ್ಟ್‌ಗೆ ಒದಗಿಸಿದರೂ ಪ್ರಯೋಜನವಾಗಿಲ್ಲ. ಇದಕ್ಕೆ ಪ್ರೇರಣೆ ನೀಡಿದ ಇಬ್ಬರು ಮಕ್ಕಳ ತಾಯಿಯನ್ನೂ ಕೋರ್ಟ್ ಕ್ಷಮಿಸಿದೆ. ಅತ್ಯಾಚಾರವೆಸಗಲು ತಾಯಿಯೇ ದುಷ್ಪ್ರೇರಣೆ ನೀಡದ್ದರು ಎನ್ನಲಾಗಿದೆ.
ಅತ್ಯಾಚಾರ ನಡೆದಾಗ ಇಬ್ಬರು ಸಹೋದರಿಯ ವಯಸ್ಸು 21 ಹಾಗೂ 15 ವರ್ಷಗಳು. ಇವರಿಬ್ಬರೂ ತಮ್ಮ ತಂದೆತಾಯಿ ಹಾಗೂ ಜ್ಯೋತಿಷಿಯ ವಿರುದ್ಧ 2009ರಲ್ಲಿ ದೂರು ದಾಖಲಿಸಿದ್ದರು. ತಮ್ಮ ಮೇಲೆ ಹಲವಾರು ವರ್ಷಗಳಿಂದ ತಮ್ಮ ತಂದೆ ಹಾಗೂ ಜ್ಯೋತಿಷಿ ಅತ್ಯಾಚಾರ ಮಾಡಿದರು. ಕೆಲವೊಮ್ಮೆ ಇಬ್ಬರೂ ಸಾಮೂಹಿಕ ಅತ್ಯಾಚಾರ ಮಾಡುತ್ತಿದ್ದರು ಎಂದು ಹಿರಿಯ ಮಗಳು ಆರೋಪಿಸಿದ್ದರು.
ರಾಥೋಡ್ ಅವರು ಮಧುಮೇಹದಿಂದ ಬಳಲುತ್ತಿದ್ದು ಅವರ ಖಾಸಗಿ ಅಂಗಗಳು ಕ್ರಿಯಾಹೀನವಾಗಿವೆ. ವೈದ್ಯಕೀಯ ಪ್ರಮಾಣ ಪತ್ರಗಳು ಇದನ್ನು ಋಜುವಾತು ಪಡಿಸಿವೆ ಎಂದು ಅವರ ಪರ ವಕೀಲರು ವಾದಿಸಿದ್ದಾರೆ. ಅತ್ಯಾಚಾರಕ್ಕೆ ಬಳಸಿಕೊಳ್ಳಲಾದ ಹಾಸಿಗೆ, ರಾಥೋಡ್ ಅವರ ವಯಸ್ಸು, ಆರೋಗ್ಯ ಗಮನಿಸಿದರೆ ಸಾಮೂಹಿಕ ಅತ್ಯಾಚಾರ ಸಾಧ್ಯವೆ ಇಲ್ಲ ಎಂದು ವಾದಿಸಲಾಗಿದೆ.












Click it and Unblock the Notifications