ಅಪ್ರಾಪ್ತ ಬಾಲಕಿ ಎಂಎಂಎಸ್ ರವಾನೆ; ಮೂವರ ಬಂಧನ
ಚೆನ್ನೈ,
ಆ.4: ಅಪ್ರಾಪ್ತ ಬಾಲಕಿಯೊಬ್ಬಳ ಫೋಟೋಗಳನ್ನು ಆಕೆಗೆ ಅರಿವಿಲ್ಲದಂತೆ ತಿರುಚಿ ಅಶ್ಲೀಲ ವಿಡಿಯೋ ತಯಾರಿಸಿ ರವಾನಿಸುತ್ತಿದ್ದ ಮೂವರನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಹಮಾಸಲಿಂಗಂ (39), ಶರತ್ ಕುಮಾರ್ (19) ಹಾಗೂ ರಾಜೇಶ್ ಕುಮಾರ್ (24) ಬಂಧಿತ ಆರೋಪಿಗಳು. ಇವರೆಲ್ಲಾ ತಮಿಳುನಾಡಿನವರಾಗಿದ್ದಾರೆ. id="toptextpromo">ಪೊಲೀಸರು
ಕೊಟ್ಟ ಮಾಹಿತಿ ಹೀಗಿದೆ. ಹಣ್ಣಿನ ವ್ಯಾಪಾರಿ ಹಮಾಸಲಿಂಗಂ ಹಾಗೂ ಪೇಂಟರ್ ಶರತ್ ಕುಮಾರ್ ಅಪ್ರಾಪ್ತ ಬಾಲಕಿಗೆ ಅರಿವಿಲ್ಲದಂತೆ ಆಕೆಯ ವಿಡಿಯೋ ತೆಗೆದಿದ್ದಾರೆ. ಬಳಿಕ ಆ ವಿಡಿಯೋವನ್ನು ರಾಜೇಶ್ ಕುಮಾರ್ ಗೆ ರವಾನಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಸೆಲ್‌ಫೋನ್‌ನಲ್ಲಿ
ಚಿತ್ರೀಕರಿಸಿದ ವಿಡಿಯೋವನ್ನು ಎಡಿಟ್ ಮಾಡಿ ಅದನ್ನು ತಿರುಚಿ ಅಶ್ಲೀಲ ವಿಡಿಯೋವನ್ನಾಗಿ ತಯಾರಿಸಿ ಅದನ್ನು ಹಮಾಸಲಿಂಗ ಮೊಬೈಲ್‌ಗೆ ರವಾನಿಸಿದ್ದಾನೆ. ಅಲ್ಲಿಂದ ಮೊಬೈಲ್‍ನಿಂದ ಮೊಬೈಲ್‌ಗೆ ಸರಿದಾಡಿದೆ. ಈ ವಿಷಯ ಬಾಲಕಿಯ ತಂದೆಗೆ ತಿಳಿದುಬಂದಿದೆ. ಬಳಿಕ ಅವರು ಪೊಲೀಸರಗಮನಕ್ಕೆ ತರಲಾಗಿ ಆರೋಪಿಗಳನ್ನು ಬಂಧಿಸಲಾಗಿದೆ.











Click it and Unblock the Notifications