ಸಂಗಾತಿಯ ಸಾವಿಗೆ ಮರುಗಿದ ಶ್ವಾನಗಳು

Dogs have heart too
ಮಡಿಕೇರಿ, ಆ. 1 : ಮಡಿಕೇರಿ ತಾಲೂಕಿನ ಮೂರ್ನಾಡಿನ ವೀರಾಜಪೇಟೆ ರಸ್ತೆಯಲ್ಲಿ ಅಡ್ಡಾಡುತ್ತಿದ್ದ ಶ್ವಾನವೊಂದಕ್ಕೆ ಅದ್ಯಾರೋ ವಾಹನ ಸವಾರರು ಡಿಕ್ಕಿ ಹೊಡೆದಿದ್ದರು. ಪರಿಣಾಮ ಅದು ಸ್ಥಳದಲ್ಲಿಯೇ ರಕ್ತಸ್ರಾವಗೊಂಡು ಸಾವನ್ನಪ್ಪಿತು.

ಇದನ್ನು ಕಣ್ಣಾರೆ ನೋಡಿದ ಇತರೆ ಶ್ವಾನಗಳು ಸುತ್ತುವರೆದವು. ಇಷ್ಟು ದಿನ ಜೊತೆಯಲ್ಲಿಯೇ ಅಡ್ಡಾಡುತ್ತಿದ್ದ ತಮ್ಮ ಸಂಗಾತಿ ರಸ್ತೆ ಬದಿಯಲ್ಲಿ ನಿಸ್ತೇಜವಾಗಿ ಮಲಗಿದ್ದನ್ನು ನೋಡಿದ ಅವುಗಳ ಕಣ್ಣು ನೀರಾಯಿತು. ದುಃಖ ತಡೆಯಲಾಗಲಿಲ್ಲ, ಮರಗುತ್ತಾ ಅಲ್ಲೇ ಪಕ್ಕದಲ್ಲಿ ಮುದುಡಿ ಮಲಗಿದವು. ಸಂಜೆ 4 ಗಂಟೆಯಿಂದ ರಾತ್ರಿಯವರೆಗೂ ಅಲ್ಲೇ ಮಲಗಿ ತಮ್ಮ ನೋವನ್ನು ವ್ಯಕ್ತಪಡಿಸಿದವು.

ಶ್ವಾನಗಳ ಈ ರೀತಿಯ ಗಾಢ ಸ್ನೇಹನ್ನು ಹತ್ತಿರದಿಂದ ನೋಡಿದ ಮಂದಿ ಅಚ್ಚರಿಪಟ್ಟರು. ರಸ್ತೆ ಬದಿಯಲ್ಲಿ ಸತ್ತು ಬಿದ್ದಿದ್ದ ಶ್ವಾನವನ್ನು ತೆಗೆಯಲು ಯಾರಿಗೂ ಧೈರ್ಯ ಬರಲಿಲ್ಲ. ರಾತ್ರಿಯಾಗುತ್ತಿದ್ದಂತೆಯೇ ಪಟ್ಟಣ ಪಂಚಾಯಿತಿಯವರು ಬಂದು ಸತ್ತು ಬಿದ್ದಿದ್ದ ಶ್ವಾನವನ್ನು ಎತ್ತಿಕೊಂಡು ಹೋಗುತ್ತಿದ್ದಂತೆಯೇ ಭಾರವಾದ ಮನಸ್ಸಿನಿಂದ ಹೆಜ್ಜೆ ಹಾಕುತ್ತಾ ಹೋದವು.

ಆ ಮೂಲಕ ಮನುಷ್ಯರೇ ನಿಮಗೆ ಮಾತ್ರ ಸಂಬಂಧ, ಪ್ರೀತಿ, ಕರುಣೆ, ದುಃಖ ಇರೋದಲ್ಲ ನಮಗೂ ಇದೆ ಎಂಬುವುದನ್ನು ಸುತ್ತಲೂ ನೆರೆದಿದ್ದ ಜನರಿಗೆ ಮನದಟ್ಟು ಮಾಡಿದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+