ಅತ್ಯಧಿಕ ಸಂಬಳ ಪಡೆಯುವ ಸಾಫ್ಟ್ ವೇರ್ ಸಿಇಒ-1

ಐದು ವರ್ಷಗಳ ಕಾಲಕ್ಕೆ ವಿಪ್ರೋ ಸಂಸ್ಥೆಯ ಐಟಿ ವ್ಯವಹಾರಗಳ ಸಿಇಒ ಆಗಿ ನೇಮಕಗೊಂಡಿರುವ ಕುರಿಯನ್ ಅವರ ಸಂಬಳ ವಾರ್ಷಿಕ 3 ಕೋಟಿ ರಿಂದ 10 ಕೋಟಿ ರು ತನಕ ಇದೆ. ಇದರಲ್ಲಿ ಷೇರುಗಳ ಮೊತ್ತ ಸೇರಿಸಿಲ್ಲ ಎಂಬುದು ಗಮನಾರ್ಹ.
ಆದರೆ, ಈ ಸಂಬಳದಲ್ಲಿ ಆಗಾಗ ಬದಲಾಗುವ ವೇರಿಯಬಲ್ ಪೇ, ಬೋನಸ್, ಇತರೆ ಸೌಲಭ್ಯಗಳನ್ನು ಸೇರಿಸಲಾಗಿದೆ. 2010ರ ಆರ್ಥಿಕ ವರ್ಷದಲ್ಲಿ ಕುರಿಯನ್ 3.67 ಸಂಬಳ ಗಳಿಸಿ ಅಗ್ರಸ್ಥಾನಕ್ಕೇರಿದ್ದಾರೆ.
ಕುರಿಯನ್ ಏರಿದ ಮೆಟ್ಟಿಲುಗಳ ಹಾದಿ: 2008ರಲ್ಲಿ ವಿಪ್ರೋ ಆರಂಭಿಸಿದ ಎಕೋ ಎನರ್ಜಿ ವ್ಯವಹಾರಗಳ ಅಧ್ಯಕ್ಷರಾಗಿದ್ದ ಕುರಿಯನ್ ಮೂರು ವರ್ಷದೊಳಗೆ ಸಿಇಒ ಪದವಿಗೇರಿದವರು. ವಿಪ್ರೋ ಐಟಿ ಬಿಸಿನೆಸ್ ನ ಸಿಇಒ ಆಗಿ ಫೆಬ್ರವರಿ 2011ರಲ್ಲಿ ಕುರಿಯನ್ ಅಧಿಕಾರ ವಹಿಸಿಕೊಂಡರು.
ವಿಪ್ರೋ ಕನ್ಸಲ್ಟಿಂಗ್ ಸರ್ವೀಸಸ್ ಗೆ ಹೊಸ ಹುರುಪು ನೀಡಿದ ಕುರಿಯನ್ 2004 ರಿಂದ 2008ರ ತನಕ ಅದರ ಏಳಿಗೆಗೆ ಶ್ರಮಿಸಿದರು. ವಿಪ್ರೋ ಬಿಪಿಒ ಮುಖ್ಯಸ್ಥರಾಗಿ ಕೂಡಾ ಕುರಿಯನ್ ಅನುಭವ ಹೊಂದಿದ್ದಾರೆ.
2002ರಲ್ಲಿ ಆರಂಭವಾದ ವಿಪ್ರೋ ಹೆಲ್ತ್ ಕೇರ್ ಹಾಗೂ ಲೈಫ್ ಸೈನ್ಸ್ ವಿಭಾಗದ ಸಿಇಒ ಆಗಿ ಕುರಿಯನ್ 2003ರಲ್ಲಿ ಅಧಿಕಾರ ವಹಿಸಿಕೊಂಡರು. ವಿಪ್ರೋ ಸೇರುವ ಮೊದಲು ಜಿಇ ಏಕ್ಸ್ ರೇ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿ 1997 ರಿಂದ 2000ರವರೆಗು ಕಾರ್ಯ ನಿರ್ವಹಿಸಿದ್ದರು.
ಪ್ರಶಸ್ತಿಗಳು, ಗೌರವಾದರಗಳು: 2007ರಲ್ಲಿ ಅತ್ಯುನ್ನತ ಸಾಧನೆ ಮೆರೆದ ವಿಪ್ರೋ ಬಿಪಿಒಗೆ ಗ್ಲೋಬಲ್ ಬಿಪಿಒ ಇಂಡಸ್ಟ್ರಿ ಪ್ರಶಸ್ತಿ ಸಿಕ್ಕಿದೆ. ನ್ಯಾಸ್ ಕಾಮ್ ಇಂಡಿಯಾ ಲೀಡರ್ ಫೋರಮ್, ಡಾವೋಸ್ ನಲ್ಲಿ ನಡೆದ ವಿಶ್ವ ಆರ್ಥಿಕ ಒಕ್ಕೂಟ ಸಭೆ, ಫೈನಾನ್ಷಿಯಲ್ ಟೈಮ್ಸ್ ಅಧಿಕಾರಿಗಳ ಸಭೆಗಳಲ್ಲಿ ಕುರಿಯನ್ ಪಾಲ್ಗೊಂಡ ಮನ್ನಣೆ ಗಳಿಸಿದ್ದಾರೆ.












Click it and Unblock the Notifications