ರೆಡ್ಡಿ ಮಕ್ಕಳಿಗೆ ತಾಯಿ ಸುಷ್ಮಾ ದೂರ; ಇನ್ನು ಜೈಟ್ಲಿಯೇ ಅಪ್ಪ

ಬೆಂಗಳೂರಿನಲ್ಲಿ ಆನ್‌ಲೈನ್ ಮೂಲಕ ಆಸ್ತಿ ನೋಂದಣಿ ಮಾಡುವ ವಿನೂತನ ಸೇವೆಯ ಉದ್ಘಾಟನೆಗೆ ಬಿಜೆಪಿಯ ಮತ್ತೂಬ್ಬ ಹಿರಿಯ ನಾಯಕ ಅರುಣ್ ಜೈಟ್ಲಿ ಅವರಿಗೆ ಮಣೆ ಹಾಕಿದ್ದಾರೆ. ಈ ವಿಷಯವನ್ನು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಅವರು, ಜೈಟ್ಲಿ ಅವರು ಇನ್ನೂ ದಿನಾಂಕ ನೀಡಿಲ್ಲ. ಇನ್ನೆರಡು ದಿನಗಳಲ್ಲಿ ಅವರು ದಿನಾಂಕ ನೀಡುವ ನಿರೀಕ್ಷೆಯಿದೆ ಎಂದು ಹೇಳಿದರು.
ಬಳ್ಳಾರಿಯ ರೆಡ್ಡಿ ಸಹೋದರರಿಗೂ ಲೋಕಸಭೆ ಪ್ರತಿಪಕ್ಷ ನಾಯಕರಾದ ಸುಷ್ಮಾ ಸ್ವರಾಜ್ ಅವರಿಗೂ ದೀರ್ಘ ಕಾಲದಿಂದಲೂ ಅವಿನಾಭಾವ ಸಂಬಂಧ. ತಾಯಿ ಎನ್ನದೇ ಸುಷ್ಮಾ ಅವರ ಹೆಸರು ಹೇಳದ ರೆಡ್ಡಿ ಸಹೋದರರು ಸುಷ್ಮಾ ಅವರನ್ನು ತಮ್ಮ ಗಾಡ್ ಮದರ್ ಎಂದೇ ಪರಿಗಣಿಸಿದ್ದರು. ಆದರೆ, ಇತ್ತೀಚೆಗೆ ಸುಷ್ಮಾ ಅವರು ಇಂಗ್ಲೀಷ್ ನಿಯತಕಾಲಿಕವೊಂದರಲ್ಲಿ ರೆಡ್ಡಿ ಸಹೋದರರಿಗೂ ನನಗೂ ಸಂಬಂಧವಿಲ್ಲ ಎನ್ನುವ ಮೂಲಕ ಅಚ್ಚರಿ ಹುಟ್ಟಿಸಿದ್ದರು.
ಇದೀಗ ರೆಡ್ಡಿ ಸಹೋದರರು ಸಹ ಬಿಜೆಪಿಯಲ್ಲಿ ಸುಷ್ಮಾ ಅವರ ಪ್ರತಿಸ್ಪರ್ಧಿ ಎಂದೇ ಗುರುತಿಸಲಾಗಿರುವ ಜೈಟ್ಲಿಯನ್ನು ಸರ್ಕಾರಿ ಕಾರ್ಯಕ್ರಮವೊಂದಕ್ಕೆ ಆಹ್ವಾನಿಸುವ ಮೂಲಕ ಸುಷ್ಮಾ ಹಾಗೂ ರೆಡ್ಡಿ ಸಹೋದರರ ನಡುವೆ ಎಲ್ಲವೂ ಸರಿಯಿಲ್ಲ ಎಂಬುದನ್ನು ಜಗಜ್ಜಾಹೀರು ಮಾಡುತ್ತಿದ್ದಾರೆ.












Click it and Unblock the Notifications