ಮುಂಬೈ ತ್ರಿವಳಿ ಸ್ಫೋಟ: ಬೆಂಗಳೂರಿನಲ್ಲಿ ಐವರ ಬಂಧನ
ಮುಂಬೈ,
ಜುಲೈ 18: ಮುಂಬೈ ತ್ರಿವಳಿ ಸ್ಫೋಟಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಐವರನ್ನು ಬಂಧಿಸಲಾಗಿದೆ. ಸ್ಫೋಟದ ಸಂಬಂಧ ವಶಕ್ಕೆ ತೆಗೆದುಕೊಂಡಿದ್ದ ಫಯಾಜ್ ಉಸ್ಮಾನಿ ಶನಿವಾರ ಮೆದುಳು ಸ್ರಾವದಿಂದ ಸಾವಿಗೀಡಾವುದಕ್ಕೂ ಮುನ್ನ ಈ ಐವರ ಬಗ್ಗೆ ನೀಡಿದ್ದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಇವರನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. id="toptextpromo">ಗಮನಾರ್ಹವೆಂದರೆ
ಬಂಧಿತ ಈ ಐದೂ ಮಂದಿ ಬೆಂಗಳೂರು ನಿವಾಸಿಗಳಲ್ಲ. ಕೇರಳ, ಹೈದರಾಬಾದ್, ಭಟ್ಕಳ, ಕಾಸರಗೋಡು ಮತ್ತು ಮಂಗಳೂರಿನವರು. ಇವರೆಲ್ಲ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧನದಲ್ಲಿರುವ ಕೈದಿಗಳು ಎಂದೂ ಮೂಲಗಳು ಹೇಳಿವೆ. id='are-slot-1' class='oiad oi-axt oiadv'> id='top-searched-articles'>ಫಯಾಜ್
ಈ ಐವರೊಂದಿಗೂ ಮೊಬೈಲ್ ಮೂಲಕ ಸಂಪರ್ಕದಲ್ಲಿದ್ದ. ಅವನ ಮೊಬೈಲ್ ಕಾಲ್ ಷೀಟ್ ಅನ್ನು ಪರಿಶೀಲಿಸಿದಾಗ ಇವರ ಪತ್ತೆಯಾಗಿದೆ. ಮುಂಬೈ ಪೊಲೀಸರು ನೀಡಿದ ಸುಳಿವಿನ ಮೇರೆಗೆ ಈ ಐದು ಮಂದಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡ ಕರ್ನಾಟಕ ಆಂತರಿಕ ಭದ್ರತಾ ಪೊಲೀಸರು ಸದ್ಯಕ್ಕೆ ಇವರ ನಾಮಧೇಯಗಳನ್ನು ಬಹಿರಂಗಪಡಿಸಿಲ್ಲ.











Click it and Unblock the Notifications