ರಜಾ ಮೂಡಿನಲ್ಲಿ 'ಬುಡ್ಡಾ ಬನ್ ಗಯಾ' ಯಡಿಯೂರಪ್ಪ !

ಮಕ್ಕಳು, ಮೊಮ್ಮಕ್ಕಳೊಂದಿಗೆ ಭಾನುವಾರ ಬೆಂಗಳೂರಿನ ಮಲ್ಟಿಪ್ಲೆಕ್ಸ್‌ವೊಂದಕ್ಕೆ ತೆರಳಿದ ಅವರು ಅಮಿತಾಭ್ ಬಚ್ಚನ್-ಹೇಮಾಮಾಲಿನಿ ಅಭಿನಯದ 'ಬುಡ್ಡಾ ಹೋಗಾ ತೇರಾ ಬಾಪ್' ಚಿತ್ರ ವೀಕ್ಷಿಸಿದರು.
'ನಾನು ಅಮಿತಾಭ್ ಅವರ ಗ್ರೇಟ್ ಫ್ಯಾನ್. ಅಮಿತಾಭ್ ಚೆನ್ನಾಗಿ ಅಭಿನಯಿಸಿದ್ದಾರೆ. ಸಂಡೆ ಬೇರೆ. ಅದಕ್ಕೇ ಪಿಕ್ಚರ್ ಗೆ ಬಂದೆ. ಸಿನಿಮಾ ಸಖತ್ತಾಗಿತ್ತು. ತುಂಬಾ ತಮಾಷಿಯಾಗಿತ್ತು' ಎಂದು ಪಡ್ಡೆ ಹುಡುಗನಂತೆ ನಗುನಗುತ್ತಾ ಹೇಳಿದರು.
ಅಪರೂಪಕ್ಕೆ ಸಿನಿಮಾ ನೋಡುವ ಯಡಿಯೂರಪ್ಪ, ಹಿಂದೆಯೂ ಬಿರುಸಿನ ರಾಜಕೀಯ ಚಟುವಟಿಕೆ ನಡುವೆ ಸಿನಿಮಾ ನೋಡಿ ಅಚ್ಚರಿ ಮೂಡಿಸಿದ್ದು ಉಂಟು. ಪುರಿ ಜಗನ್ನಾಥ್ ನಿರ್ದೇಶನದ ಚಿತ್ರದಲ್ಲಿ ಪ್ರಕಾಶ್ ರಾಜ್, ಹೇಮಾಮಾಲಿನಿ, ರವೀನಾ ಟಂಡನ್ ಸಹ ಅಭಿನಯಿಸಿದ್ದಾರೆ.












Click it and Unblock the Notifications