ಬಹಿರ್ದೆಸೆಗೆ ಹೋಗಿದ್ದ ಬಾಲೆಗೆ ಗನ್ ತೋರಿಸಿ ಅತ್ಯಾಚಾರ
ಮುಜಾಫರನಗರ,
ಜೂನ್ 26: ಇಲ್ಲಿನ ಮೊಹಿಯುದ್ದೀನ್ ಪುರದಲ್ಲಿ ಬಹಿರ್ದೆಸೆಗೆ ಹೋಗಿದ್ದ 14 ವರ್ಷದ ಬಾಲಕಿಗೆ ಗನ್ ತೋರಿಸಿದ ಯುವಕನೊಬ್ಬ ಅಮಾನುಷವಾಗಿ ಅತ್ಯಾಚಾರ ಮಾಡಿದ್ದಾನೆ. id="toptextpromo">ಶುಕ್ರವಾರ
ಗ್ರಾಮದ ಹೊರವಲಯದಲ್ಲಿ ದೇಹಭಾದೆ ತೀರಿಸಿಕೊಳ್ಳಲು ಹೋಗಿದ್ದ ಸಂದರ್ಭದಲ್ಲಿ ಲಾಲ್ ಎಂಬ ಯುವಕ ಬಾಲಕಿಯನ್ನು ಪೊದೆಗಳತ್ತ ಎಳೆದೊಯ್ದು ಮಾನಭಂಗ ಮಾಡಿದ್ದಾನೆ. ಬೇರೆ ಕೋಮಿಗೆ ಸೇರಿದ ಯುವಕ ಈ ಹೀನ ಕೃತ್ಯವೆಸಗಿದ್ದು, ಅತ್ಯಾಚಾರದ ಬಗ್ಗೆ ಬಾಯ್ಬಿಟ್ಟರೆ ಕೊಲ್ಲುವುದಾಗಿ ಬಾಲಕಿಗೆ ಬೆದರಿಕೆ ಹಾಕಿದ್ದ ಎಂದು ಪೊಲೀಸರು ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಬಾಧಿತ
ಬಾಲಕಿಯ ತಂದೆ ಆರೋಪಿಯ ವಿರುದ್ಧ ದೂರು ದಾಖಲಿಸಿದ್ದು, ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ. ಘಟನೆಯ ಬಳಿಕ ಗ್ರಾಮದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.











Click it and Unblock the Notifications