ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಕರುಳುಬೇನೆ, ಚಿಕುನ್ ಗೂನ್ಯ ಅಟ್ಯಾಕ್

By Prasad
|
Google Oneindia Kannada News

Gastroenteritis on rise in Bangalore
ಬೆಂಗಳೂರು, ಜೂ. 19 : ಬೆಂಗಳೂರಿನ ನಾಗರಿಕರಿಗೆ ಇದೊಂದು ಎಚ್ಚರಿಕೆಯ ಗಂಟೆ. ಕಾರ್ಮೋಡಗಳೆಲ್ಲ ಕಟ್ಟಿಕೊಂಡು ಮಳೆ ಸುರಿಸಲು ಅಣಿಯಾಗುತ್ತಿದ್ದಂತೆ ಕರಳುಬೇನೆ, ಚಿಕುನ್ ಗೂನ್ಯಾ, ಡೆಂಗ್ಯೂ ಸೇರಿದಂತೆ ನಾನಾ ರೋಗಗಳು ಆರೋಗ್ಯವನ್ನು ಕದಡಿ, ಜನರನ್ನು ಹಣಿಯಲು ಸಿದ್ಧವಾಗುತ್ತಿವೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅನೇಕ ಆಸ್ಪತ್ರೆಗಳಲ್ಲಿ ಕರಳುಬೇನೆ, ಚಿಕುನ್ ಗೂನ್ಯಾ ಪ್ರಕರಣಗಳು ದಾಖಲಾಗಲು ಪ್ರಾರಂಭವಾಗಿವೆ. 2011ರಲ್ಲಿ ಒಟ್ಟು 511 ಪ್ರಕರಣಗಳು ದಾಖಲಾಗಿವೆ. ನಾವು ಈಗಲೆ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಈ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಲಿವೆ ಎಂದು ಬಿಬಿಎಂಪಿ ವೈದ್ಯಾಧಿಕಾರಿ ಎಚ್ಚರಿಸಿದ್ದಾರೆ.

ಬೆಂಗಳೂರಿನ ನಲ್ಲಿಗಳಲ್ಲಿ ಹರಿದುಬರುವ ಕುಡಿಯುವ ನೀರು ಸ್ವಚ್ಛವಾಗಿರುವುದಿಲ್ಲವೆಂಬುದನ್ನು ಜನರು ಮನಗಾಣಬೇಕಾಗಿದೆ. ಅನೇಕ ಕಡೆಗಳಲ್ಲಿ ಅಭಿವೃದ್ಧಿ(?) ಕಾರ್ಯಗಳು ನಡೆಯುತ್ತಿರುವುದರಿಂದ ನೆಲ ಅಗಿತದ ಕಾರಣ ನೀರಿನ ಪೈಪುಗಳು ಒಡೆದು ಚರಂಡಿ ನೀರು ಕುಡಿಯುವ ನೀರಿನಲ್ಲಿ ಸೇರಿಕೊಳ್ಳುತ್ತಿದೆ. ಇದೇ ನೀರನ್ನು ಜನರು ಸೇವಿಸುತ್ತಿರುವುದು ರೋಗ ಬರಲು ಕಾರಣವಾಗಿದೆ.

ಮೇಲಿನ ಸಂಖ್ಯೆಗಳು ಬೌರಿಂಗ್ ಮತ್ತು ವಿಕ್ಟೋರಿಯಾ ಆಸ್ಪತ್ರೆಗಳಲ್ಲಿ ದಾಖಲಾದ ರೋಗಿಗಳ ಸಂಖ್ಯೆ. ಇನ್ನೂ ಖಾಸಗಿ ಆಸ್ಪತ್ರೆಗಳಿಗೆ ಹೋಗುವವರು ಎಷ್ಟು ಜನರೋ? ಈ ನಿಟ್ಟಿನಲ್ಲಿ ಜಲಮಂಡಳಿ ಇಲಾಖೆಯ ಜವಾಬ್ದಾರಿ ಅಧಿಕವಾಗಿದೆ. ಎಲ್ಲೆಲ್ಲಿ ಕುಡಿಯುವ ನೀರಿನಲ್ಲಿ ಚರಂಡಿ ನೀರು ಸೇರುತ್ತಿದೆಯೋ ಅಲ್ಲೆಲ್ಲ ಪೈಪುಗಳನ್ನು ಬದಲಿಸಬೇಕಿದೆ.

ಎಲ್ಲಕ್ಕಿಂತ ಹೆಚ್ಚಾಗಿ, ಜನರೇ ಎಚ್ಚೆತ್ತುಕೊಳ್ಳಬೇಕು. ಎಲ್ಲೆಂದರಲ್ಲಿ ನೀರು ಕುಡಿಯುವುದು, ಸಿಕ್ಕದ್ದು ತಿನ್ನುವುದು, ಅಪರಿಚಿತರ ಸಂಪರ್ಕಕ್ಕೆ ಬರುವುದು, ರೋಗ ಬಂದ ಕೂಡಲೆ ಕೂಡಲೆ ಚಿಕಿತ್ಸೆ ಪಡೆದುಕೊಳ್ಳದಿರುವುದನ್ನು ಕಡಿಮೆ ಮಾಡಬೇಕಿದೆ. ರೋಗ ಬಂದ ನಂತರ ಚಿಕಿತ್ಸೆ ಪಡೆಯುವ ಬದಲು ಮುನ್ನೆಚ್ಚರಿಕೆ ಕೈಗೊಳ್ಳುವುದೇ ಕ್ಷೇಮ ಮತ್ತು ಜಾಣತನ.

ಎಚ್ಚರಿಕೆಯ ಮಾತುಗಳು

* ಮನೆಯಲ್ಲಿ, ಹೊಟೇಲುಗಳಲ್ಲಿ ಕುಡಿಯುವ ನೀರಿನ ಬಗ್ಗೆ ಎಚ್ಚರಿಕೆವಹಿಸಿ.
* ತಣ್ಣೀರಿನ ಬದಲು ಕಾದು ಆರಿಸಿದ ನೀರು ಕುಡಿಯುವುದನ್ನು ರೂಢಿಸಿಕೊಳ್ಳಿ.
* ಸಾಧ್ಯವಾದ ಮಟ್ಟಿಗೆ ಹೊರಗಡೆಯ ಆಹಾರ ತಿನ್ನುವುದನ್ನು ನಿಲ್ಲಿಸಿ.
* ಕೆಲಸದಿಂದ ಮನೆಗೆ ಮರಳಿದ ಕೂಡಲೆ ಸೋಪಿನಿಂದ ಕೈ ಚೆನ್ನಾಗಿ ತೊಳೆಯಿರಿ.
* ಅನುಮಾನ ಬರುತ್ತಲೇ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಿರಿ.
* ಹೂಕುಂಡಗಳಲ್ಲಿ, ಚಿಪ್ಪುಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಿ.

English summary
Cases of gastroenteritis, dengue, chikungunya are on the rise in BBMP zones in Bangalore. Bangaloreans need to take care of their health and take precautionary measures. Prevention is always better than cure, mind it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X