ಷೇರು ಮಾರುಕಟ್ಟೆ ಪ್ರವೇಶಕ್ಕೆ ಫೇಸ್ ಬುಕ್ ಸರ್ವ ಸನ್ನದ್ಧ

Facebook to release IPO soon
ನ್ಯೂಯಾರ್ಕ್ ಜೂ 19: ಜಾಗತಿಕ ಜನಪ್ರಿಯ ಸಾಮಾಜಿಕ ತಾಣ ಫೇಸ್ ಬುಕ್ ಮುಂದಿನ ಅಕ್ಟೋಬರ್ ಅಥವಾ ಡಿಸೆಂಬರ್ ನಲ್ಲಿ ಪ್ರಾಥಮಿಕ ಷೇರು ಬಿಡುಗಡೆ ಮೂಲಕ ಷೇರು ಮಾರುಕಟ್ಟೆ ಪ್ರವೇಶಕ್ಕೆ ಸಜ್ಜಾಗಿದೆ ಎಂದು ಸಿಎನ್ ಬಿಸಿ ವರದಿ ಮಾಡಿದೆ.

ವರದಿ ಪ್ರಕಾರ ಗೋಲ್ಡ್ ಮನ್ ಸ್ಯಾಚ್ಸ್ ಈ ಬಿಡುಗಡೆಗೆ ಮ್ಯಾನೇಜರ್ ಆಗಿದ್ದು, ಫೇಸ್ ಬುಕ್ ವಿಶ್ವಾದ್ಯಂತ 500 ಮಿಲಿಯನ್ ಬಳಕೆದಾರರನ್ನು ಹೊಂದಿದೆ. ಕಳೆದ ತಿಂಗಳು ಸುದ್ದಿಗಾರರೊಂದಿಗೆ ಮಾತನಾಡಿದ್ದ ಫೇಸ್ ಬುಕ್ ನ ಚೀಫ್ ಆಪರೇಟಿಂಗ್ ಆಫೀಸರ್ ಅವರು, ಪ್ರಾಥಮಿಕ ಷೇರು ವಿತರಣೆ ಅನಿವಾರ್ಯ ಎಂದಿದ್ದರಲ್ಲದೆ ಹೆಚ್ಚಿನ ವಿವರಗಳನ್ನು ನೀಡಲು ನಿರಾಕರಿಸಿದ್ದರು.

ಕಳೆದ ತಿಂಗಳು ಜಾಗತಿಕ ವೃತ್ತಿಪರ ವೆಬ್ ಸೈಟ್ ಲಿಂಕ್ಡ್ ಇನ್ 7 ಬಿಲಿಯನ್ ಮೌಲ್ಯದ ಪ್ರಾಥಮಿಕ ಷೇರುವಿತರಣೆ ಮಾಡಿತ್ತು. ಈ ತಿಂಗಳ ಮೊದಲ ಭಾಗದಲ್ಲಿ ಡೇಲಿ ಡೀಲ್ಸ್ ತಾಣ ಗ್ರೂಪಾನ್ 750 ಮಿಲಿಯನ್ ಡಾಲರ್ ಮೌಲ್ಯ ಷೇರು ವಿತರಣೆ ಮಾಡಲು ಅರ್ಜಿ ಸಲ್ಲಿಸಿದೆ.

ಈ ವರ್ಷದ ಮೊದಲ ಭಾಗದಲ್ಲಿ ಜಾಗತಿಕ ಹೂಡಿಕೆ ಕಂಪೆನಿ ಗೋಲ್ಡ್ ಮನ್ ಸ್ಯಾಚ್ಸ್ ಫೇಸ್ ಬುಕ್ ನಲ್ಲಿ ಹೂಡಿಕೆ ಮಾಡಿದ್ದು ಕಂಪೆನಿಯ ಮೌಲ್ಯವನ್ನು 50 ಬಿಲಿಯನ್ ಡಾಲರ್ ಎಂದು ಅಂದಾಜಿಸಿತ್ತು. ಪ್ರಮುಖ ಅಧ್ಯಯನ ಕಂಪೆನಿಗಳ ಪ್ರಕಾರ ಫೇಸ್ ಬುಕ್ ಮೌಲ್ಯ 70 ರಿಂದ 80 ಬಿಲಿಯನ್ ಡಾಲರ್ ಎಂದು ಅಂದಾಜಿಸಿದ್ದು ವಾರ್ಷಿಕ 4 ಬಿಲಿಯನ್ ಡಾಲರ್ ಮೌಲ್ಯದ ಜಾಹೀರಾತು ಮಾರುಕಟ್ಟೆ ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+