ಯಾದಗಿರಿಯ ಎಲ್ಲಾ ಬ್ಯಾಂಕ್ ಎಟಿಎಂ ಜೇಬಿಗೆ ತೂತು

ಯಾದಗಿರಿ ಜಿಲ್ಲೆಯ ಜನರಿಗೆ ಇದು ಒಂದೆ ದಿನದ ಸಮಸ್ಯೆ ಅಲ್ಲ. ವಾರದಲ್ಲಿ ಎರಡರಿಂದ ಮೂರು ದಿನಗಳ ಕಾಲ ಎಟಿಎಂಗಳು ಖಾಲಿಯಾಗುತ್ತವೆ. ಕಳೆದ ವಾರದಿಂದ ಯಾವ ಎಟಿಎಂಗಳ ಜೇಬುಗಳು ಖಾಲಿಯಾಗಿರುವುದು ಜನರು ಪರದಾಡುವಂತೆ ಮಾಡಿದೆ.
ಜಿಲ್ಲಾ ಕೇಂದ್ರದಲ್ಲಿ 8 ಎಟಿಎಂಗಳಿದ್ದರೂ ಯಾವುದೇ ಎಟಿಎಂನಿಂದ ಹಣ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಎಲ್ಲ ಎಟಿಎಂಗಳನ್ನು ಅಲೆದಾಡಿದ ಗ್ರಾಹಕರು ಬ್ಯಾಂಕುಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಸಂಬಂಧ ಪಟ್ಟವರಿಗೆ ದೂರು ನೀಡಿದರೂ ಬರಕತ್ತಾಗಿಲ್ಲ.
ಯಾವುದೇ ಬ್ಯಾಂಕ್ ಒಮ್ಮೆ ಎಟಿಎಂ ತೆರೆದರೆ 24 ಗಂಟೆ ತೆರೆದಿರಬೇಕು ಎಂಬ ನಿಯಮವಿದೆ. ಹಣ ಖಾಲಿಯಾದರೆ ಮತ್ತೆ ತುಂಬಬೇಕು. ಗ್ರಾಹಕರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಆರ್‌ಬಿಐ ಸೂಚನೆಯಿದೆ. ಆದರೂ ಯಾದಗಿರಿಯಲ್ಲಿ ಎಟಿಎಂ ಖಾಲಿಖಾಲಿ.
ಯಾದಗಿರಿಯಲ್ಲಿ ಇರುವ ಬ್ಯಾಂಕುಗಳು : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಕ್ಸಿಸ್, ಸಿಂಡಿಕೇಟ್, ಐಸಿಐಸಿಐ, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್.












Click it and Unblock the Notifications