ನೆಂಟ ಎಂದು ಮನೆಗೆ ಬಿಟ್ಟರೆ, ಸೊಂಟ ಮುಟ್ಟಿದ

ಇಲ್ಲಿನ ವಿದ್ಯಾಗಿರಿಯಲ್ಲಿ ಆರೋಪಿ ಮಿಥುನ್ ಮೂಲತಃ ಮಡಿಕೇರಿಯವನು, ವಿದ್ಯಾಗಿರಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾನೆ. ಹೈಸ್ಕೂಲ್ ವಿದ್ಯಾರ್ಥಿಯ ಮನೆ ಅವರ ಪರಿಚಯ, ದೂರದ ಸಂಬಂಧದ ಹಿನ್ನೆಲೆಯ ಲಾಭ ಪಡೆದು ಮನೆಯವರಿಗೆ ಆಪ್ತವಾಗಿದ್ದ. ಮಧ್ಯಾಹ್ನ ವೇಳೆ ಆಗಾಗ ಊಟಕ್ಕೆ ಬಂದು ಹುಡುಗಿಯ ಪೋಷಕರೊಡನೆ ಆಪ್ತವಾಗಿ ಹರಟೆ ಕೊಚ್ಚುತ್ತಾ ಕೂತಿರುತ್ತಿದ್ದ.
ಮೊನ್ನೆ ಹೈಸ್ಕೂಲ್ ವಿದ್ಯಾರ್ಥಿ ಶಾಲೆಗೆ ರಜೆ ಇದ್ದರಿಂದ ಮನೆಯಲ್ಲಿ ಒಬ್ಬಳೇ ಆರಾಮವಾಗಿ ಕೂತು ಟಿವಿ ನೋಡುತ್ತಿದ್ದಳು. ಸಂಜೆ ವೇಳೆ ಮನೆಗೆ ಬಂದ ಆರೋಪಿ ಕಣ್ಣು ಆಕೆಯನ್ನು ನೋಡಬಾರದ ದೃಷ್ಟಿಯಿಂದ ನೋಡಿದೆ. ಮಿಥುನ್ ಮನದ ಕಾಮನೆಗಳು ಕೆರಳಿ, ಹುಡುಗಿಯ ಕೈ ಹಿಡಿದು ಎಳೆದು ಸೊಂಟಕ್ಕೆ ಕೈ ಹಾಕಿ, ಮಾನಭಂಗಕೆ ಯತ್ನಿಸಿದ್ದಾನೆ.
ದಿಢೀರ್ ಬರಸೆಳೆದ ಅವರ ವರ್ತನೆಗೆ ಕಂಡು ಗಾಬರಿಯಾದ ಹುಡುಗಿ, ತಕ್ಷಣವೇ ಪ್ರತಿಭಟಿಸಿ ಕೂಗಾಡಿದ್ದಾಳೆ. ಅದೃಷ್ಟವಶಾತ್ ಸಮಯಕ್ಕೆ ಸರಿಯಾಗಿ ನೆರವಿಗೆ ಬಂದ ಸ್ಥಳೀಯರು ಆರೋಪಿಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಮನೆಯಲ್ಲಿ ಪ್ರಾಯಕ್ಕೆ ಬಂದ ಹೆಣ್ಣು ಮಗಳಿರುವಾಗ ಪರಿಚಯಸ್ಥರಾದರೂ ಜಾಗರೂಕತೆಯಿಂದ ಇರುವುದು ಒಳ್ಳೆಯದು ಎಂದು ಹುಡುಗಿಯ ಪೋಷಕರಿಗೆ ಪೊಲೀಸರು ಬುದ್ಧಿವಾದ ಹೇಳಿ ಕಳಿಸಿದ್ದಾರೆ.












Click it and Unblock the Notifications