ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಅಗ್ನಿ ಆಕಸ್ಮಿಕ, ತಪ್ಪಿದ ಅನಾಹುತ

By Prasad
|
Google Oneindia Kannada News

Fire accident on Brigade road (pic : tech.gaeatimes.com)
ಬೆಂಗಳೂರು, ಮೇ 14 : ನಗರದ ಬ್ರಿಗೇಡ್ ರಸ್ತೆಯಲ್ಲಿರುವ ಬಿಪಿಎಂ ಸಾಫ್ಟ್ ವೇರ್ ಕಂಪನಿ ಇರುವ ಕಟ್ಟಡದಲ್ಲಿ ಇಂದು 11.30ರ ಸುಮಾರಿಗೆ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಬೆಂಕಿಯನ್ನು ನಂದಿಸಲು 9 ಅಗ್ನಿಶಾಮಕ ವಾಹನಗಳು ಸತತವಾಗಿ ಯತ್ನಿಸುತ್ತಿವೆ. ಮಧ್ಯಾಹ್ನವಾದರೂ ಸಂಪೂರ್ಣವಾಗಿ ನಂದಿಸುವಲ್ಲಿ ಸಫಲವಾಗಿಲ್ಲ.

ಸಾಫ್ಟ್ ವೇರ್ ಕಂಪನಿ ಇರುವ ಕಟ್ಟದ ಕೆಳಗಿನ ಎರಡು ಮಹಡಿಯಲ್ಲಿರುವ ಹೊಟೇಲ್ ನಲ್ಲಿ ಸಿಲಿಂಡರ್ ಸ್ಫೋಟಗೊಂಡಿದ್ದರಿಂದ ಅಗ್ನಿ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈಗ ವಾರಾಂತ್ಯವಾದ್ದರಿಂದ ಕಂಪನಿಯಲ್ಲಿ ಯಾರೂ ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದಂತಾಗಿದೆ. ಸಾಕಷ್ಟು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದು, ಹೊಗೆ ಕಟ್ಟಡದಲ್ಲೆಲ್ಲ ಪಸರಿಸಿಕೊಂಡಿದೆ.

ಕಂಪನಿ ಕಾರ್ಯನಿರ್ವಹಿಸುತ್ತಿದ್ದ ಸಮಯದಲ್ಲೇನಾದರೂ ಅಗ್ನಿ ಆಕಸ್ಮಿಕ ಸಂಭವಿಸಿದ್ದರೆ ಮತ್ತೊಂದು ಕಾರ್ಲ್ಟನ್ ಸೆಂಟರ್ ದುರಂತ ಸಂಭವಿಸುವುದರಲ್ಲಿ ಅನುಮಾನವೇ ಇರಲಿಲ್ಲ. ಯಾಕೆಂದರೆ, ಅಗ್ನಿಯಿಂದ ಆಗಿರುವ ಪ್ರಮಾಣ ಆಮಟ್ಟದ್ದಿದೆ. ಕ್ಯಾಂಟೀನ್ ನಲ್ಲಿನ ಪೀಠೋಪಕರಣಗಳು ಸಂಪೂರ್ಣ ಭಸ್ಮವಾಗಿವೆ. ಕಟ್ಟಡದ ಕಿಟಕಿ ಗಾಜುಗಳನ್ನು ಒಡದು ಒಳಗೆ ಹಬ್ಬುತ್ತಿರುವ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳದವರು ಹರಸಾಹಸ ಪಡುತ್ತಿದ್ದಾರೆ.

English summary
Fire accident has occured at the building where BPC software India company is located on Brigade road, Bangalore. 9 fire fighting vehicles are trying to drouse the fire. Thank God it is weekend. Otherwise the damage would have been unimaginable.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X