ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಇನ್ನು ಸ್ವತಂತ್ರ ಹಕ್ಕಿ

By Srinath
|
Google Oneindia Kannada News

Veerappan's wife Muthulakshmi
ಚಾಮರಾಜನಗರ, ಏ. 21: ಕಾಡುಗಳ್ಳ ವೀರಪ್ಪನ್ ನಿಂದ ಈ ಹಿಂದೆಯೇ ಮುಕ್ತಿ ಪಡೆದಿದ್ದ ಅವನ ಪತ್ನಿ ಮುತ್ತುಲಕ್ಷ್ಮಿ ಇದೀಗ ಕಾನೂನು ಬಂಧನದಿಂದಲೂ ಮುಕ್ತಳಾಗಿ ಸ್ವತಂತ್ರ ಜೀವನಕ್ಕೆ ಕಾಲಿರಿಸಿದ್ದಾಳೆ. ನಗರದ ಸತ್ರ ನ್ಯಾಯಾಲಯವು ಮುತ್ತುಲಕ್ಷ್ಮಿ ಭಾಗಿಯಾಗಿದ್ದಳೆನ್ನಲಾದ ಕೊನೆಯ ಪ್ರಕರಣದ ವಿಚಾರಣೆ ನಡೆಸಿ, ಅವಳನ್ನು ಬುಧವಾರ ಆರೋಪ ಮುಕ್ತಗೊಳಿಸಿದೆ.

ಒಟ್ಟು ಐದು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಮುತ್ತುಲಕ್ಷ್ಮಿಯನ್ನು ರಾಜ್ಯ ಪೊಲೀಸರು 2008ರ ನವೆಂಬರ್ 26ರಂದು ಮೆಟ್ಟೂರಿನಲ್ಲಿ ಬಂಧಿಸಿದ್ದರು. ಎಲ್ಲ ಐದೂ ಪ್ರಕರಣಗಳಲ್ಲಿ ಖುಲಾಸೆಗೊಂಡ ಮುತ್ತುಲಕ್ಷ್ಮಿಯನ್ನು ಗುರುವಾರ ಬೆಂಗಳೂರಿನ ಕಾರಾಗೃಹದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ.

1993ರ ಮೇ 24ರಂದು ಮಹದೇಶ್ವರ ಬೆಟ್ಟ ಠಾಣೆ ಸರಹದ್ದಿನ ರಂಗಸ್ವಾಮಿ ವಡ್ಡುವಿನಲ್ಲಿ ನಡೆದ ಆರು ಪೊಲೀಸರ ಹತ್ಯೆ ಪ್ರಕರಣದಲ್ಲಿ ಸಾಕ್ಷ್ಯಾಧಾರದ ಕೊರತೆಯ ನೆಪವೊಡ್ಡಿ ಮುತ್ತುಲಕ್ಷ್ಮಿ ಮತ್ತು ವೀರಪ್ಪನ್ ನ ಸಹಚರೆ ಪಾಪತ್ತಿ ಎಂಬುವಳನ್ನು ಖುಲಾಸೆಗೊಳಿಸಿದೆ. ತೀರ್ಪು ಪ್ರಕಟವಾದ ಬಳಿಕ ನ್ಯಾಯಾಲಯದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಳು. ಸಂತೋಷ ತಡೆಯಲಾರದೆ ಭಾವೋದ್ವೇಗಕ್ಕೆ ಒಳಗಾಗಿ ಕಣ್ಣಿರು ಹಾಕುತ್ತಲೇ ಮಾತನಾಡಿದ ಮುತ್ತುಲಕ್ಷ್ಮಿ, ಕೊನೆಗೂ ನನಗೆ ನ್ಯಾಯ ದಕ್ಕಿತು. ಇಬ್ಬರು ಹೆಣ್ಣುಮಕ್ಕಳೊಂದಿಗೆ ಮೆಟ್ಟೂರಿನಲ್ಲಿ ನೆಮ್ಮದಿಯಾಗಿ ಜೀವನ ನಡೆಸುವೆ ಎಂದು ಹೇಳಿದಳು.

ನಾನು ನಿರಪರಾಧಿ. ನನ್ನ ಪತಿ ವೀರಪ್ಪನ್ ಮಾಡಿದ ತಪ್ಪಿಗಾಗಿ ನನ್ನನ್ನು ಜೈಲಿನಲ್ಲಿ ಕೂಡಿಹಾಕಿದ್ದರು. ನನ್ನ ಮೇಲಿರುವ ಎಲ್ಲ ಆರೋಪಗಳಿಂದ ಮುಕ್ತಳಾಗಿ ಹೊರಬರುವ ವಿಶ್ವಾಸ ಹೊಂದಿದ್ದೆ. ನಂಬಿಕೆ ಸುಳ್ಳಾಗಲಿಲ್ಲ. ಎಲ್ಲ ಪ್ರಕರಣಗಳಿಂದಲೂ ಮುಕ್ತಳಾಗಿದ್ದೇನೆ ಎಂದು ಸಂತೋಷಗೊಂಡಳು.

English summary
Forest brigand Veerappan's wife Muthulakshmi is now a free bird. She is acquitted in a case that was pending against her. The Chamrajnagar principal and session judge has ordered her release on wednesday April 20.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X