ವಿಶ್ವಕನ್ನಡ ಮೇಳ ಪುಸ್ತಕ ಮಳಿಗೆಗೆ ಅರ್ಜಿ ಸಲ್ಲಿಸಿ

ಮಳಿಗೆ ಪಡೆಯುವ ಬಗೆ?: ಮಳಿಗೆಯೊಂದಕ್ಕೆ ರೂ. 1,000ಗಳ ಬಾಡಿಗೆ ಹಾಗೂ ರೂ.1,000ಗಳ ಭದ್ರತಾ ಠೇವಣಿ ಮೊತ್ತದ ಡಿ.ಡಿ.ಯನ್ನು (ಪ್ರತ್ಯೇಕ) ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಅವರ ಹೆಸರಿನಲ್ಲಿ ಸಲ್ಲಿಸುವುದು.
ಮೇಳದಲ್ಲಿ ಭಾಗವಹಿಸಲು ಇಚ್ಚಿಸುವ ಪ್ರಕಾಶಕರು / ಮಾರಾಟಗಾರರು ನಿಗದಿತ ಅರ್ಜಿ ನಮೂನೆಯನ್ನು ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು ಕಚೇರಿ ಅಥವಾ ಆಯಾ ಜಿಲ್ಲೆಯಲ್ಲಿ ಇರುವ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಗಳಲ್ಲಿ ದಿನಾಂಕ 15.02.2011 ರಿಂದ 28.02.2011ರವರೆಗೆ ಅರ್ಜಿಯನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.
ಭರ್ತಿ ಮಾಡಿದ ಅರ್ಜಿಯನ್ನು ಡಿ.ಡಿ.ಯೊಂದಿಗೆ ದಿನಾಂಕ 28.02.2011ರಂದು ಸಂಜೆ 5.30ರೊಳಗೆ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು ಅವರ ಹೆಸರಿಗೆ ಸಲ್ಲಿಸಲು ಕೋರಿದೆ.
ಹೆಚ್ಚಿನ ಮಾಹಿತಿಗಾಗಿ :
ಆಡಳಿತಾಧಿಕಾರಿಗಳು,
ಕನ್ನಡ ಪುಸ್ತಕ ಪ್ರಾಧಿಕಾರ,
ಕನ್ನಡ ಭವನ, ಜೆ.ಸಿ. ರಸ್ತೆ,
ಬೆಂಗಳೂರು - 560 002
ದೂರವಾಣಿ ಸಂಖ್ಯೆ (080) 2248 4516/ 22107704 ನ್ನು ಸಂಪರ್ಕಿಸಬಹುದಾಗಿದೆ.












Click it and Unblock the Notifications